ಶಿವಮೊಗ್ಗದ ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್ ಶೋರೂಂನಲ್ಲಿ ವಿಶ್ವ ವಜ್ರ ಪ್ರದರ್ಶನವನ್ನು ಎಚ್ ಬಿ ಟಿ ಅರೆಕಾನಟ್ನ ಮಾಲಕಿ ದಿವ್ಯಾ ಪ್ರೇಮ್ ಉದ್ಘಾಟಿಸಿದರು.
ಮಾ. 8 ರಿಂದ 18 ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಇಟಲಿ, ಫ್ರಾನ್ಸ್, ಅಮೆರಿಕ, ಬೆಲ್ಜಿಯಮ್, ಸಿಂಗಪೂರ್, ಟರ್ಕಿ ಮತ್ತು ಮಧ್ಯಪ್ರಾಚ್ಯ ದೇಶಗಳ ವಿವಿಧ ದೇಶಗಳ ವಜ್ರಾಭರಣಗಳನ್ನು ಅತಿಥಿಗಳು ಅನಾವರಣ ಗೊಳಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಆಭರಣಗಳು 10 ಸಾವಿರ ಕ್ಯಾರೆಟ್ ಐಜಿಐ ಪ್ರಮಾಣೀಕೃತ ೪ಸಿ ಪರಿಪೂರ್ಣ ನೈಸರ್ಗಿಕ ವಜ್ರಾಭರಣಗಳಾಗಿವೆ. ಎಪಿಎಂಸಿ ಯಾರ್ಡಿನ ಎಚ್ಬಿಟಿ ಅರೆಕಾನಟ್ ಕಂಪನಿಯ ಮಾಲಕಿ ದಿವ್ಯಾ, ಉದ್ಯಮಿ ಕೃತಿ, ರಿಪ್ಪನ್ಪೇಟೆಯ ಉದ್ಯಮಿ ಶ್ವೇತಾ ನಿಶಾಂತ್, ಶಿವಮೊಗ್ಗದ ಉದ್ಯಮಿ ಕೆ. ಗಣೇಶ್ ಪ್ರಸಾದ್ ಮತ್ತು ಮಾ ಡೆವೆಲಪರ್ಸ್, ಎಸ್ಎಸ್ ಕನ್ಸ್ಟ್ರಕ್ಷನ್ನ ಮ್ಯಾನೇಜಿಂಗ್ ಡೈರೆಕ್ಟರ್ ಸುನೀತಾ ಮೇರಿ ಸಿಂಗ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವಜ್ರಾಭರಣಗಳ ಪ್ರತಿ ಕ್ಯಾರೆಟ್ ಮೇಲೆ 8 ಸಾವಿರ ರೂಪಾಯಿಯ ರಿಯಾಯಿತಿ ಪ್ರದರ್ಶನದ ಅವಯಲ್ಲಿರುತ್ತದೆ.
ಬ್ರ್ಯಾಂಚ್ ಮ್ಯಾನೇಜರ್ ಅಜಿತ್ ಸ್ವಾಗತಿಸಿ, ಸೇಲ್ಸ್ ಮ್ಯಾನೇಜರ್ ಸವಾದ್ ತಂಗಳ್ ವಂದಿಸಿ, ದೀಕ್ಷಾ ಸಜಯ್ ನಿರೂಪಿಸಿದರು.