ಯಡಿಯೂರಪ್ಪ ಪ್ರಯಾಣಿಸುತಿದ್ದ ಹೆಲಿಕಾಪ್ಟರ್ ಲ್ಯಾಂಡಿಗ್ ವೇಳೆ ತಪ್ಪಿದ ಭಾರಿ ಅನಾಹುತ|BSY

ಇಂದು ಕಲಬುರಗಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ಹೆಲಿಕಾಪ್ಟರ್​ ಲ್ಯಾಂಡಿಂಗ್​ ವೇಳೆ ಪೈಲೆಟ್ ಇದ್ದಕ್ಕಿದ್ದಂತೆ ಹೆಲಿಕಾಪ್ಟರ್​ನ್ನ ಪುನಃ ಆಗಸದೆತ್ತರಕ್ಕೆ ಹಾರಿಸಿದರು.ಇದು ಕೆಲಕಾಲ ಆತಂಕ ಮೂಡಿಸಿತ್ತು. 




ನಡೆದಿದ್ದೇನು??? :

 ಅಲ್ಲಿದ್ದ ಪ್ಲಾಸ್ಟಿಕ್​ಗಳು, ಇವತ್ತು ಹೆಲಿಕಾಪ್ಟರ್​ ಕ್ರಾಶ್​ಗೂ ಕಾರಣವಾಗುವ ಆತಂಕವಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ಪೈಲೆಟ್ , ಹೆಲಿಕಾಪ್ಟರ್ ಲ್ಯಾಂಡಿಂಗ್​ ಮಾಡುವ ಬದಲು, ಪುನಃ ಆಗಸದೆತ್ತರಕ್ಕೆ ಹಾರಿದರು. ಬಳಿಕ ಕೆಲಕ್ಷಣಗಳ ನಂತರ ಪುನಃ ಬಂದು ಲ್ಯಾಂಡ್ ಮಾಡಿದರು. 


ಘಟನೆಯ ಬಗ್ಗೆ ವಿವರಣೆ ನೀಡಿದ ಪೈಲೆಟ್ ಜೋಸೆಪ್​, ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ಹಾಗೆ, ಹೆಲಿಕಾಪ್ಟರ್​ ಲ್ಯಾಂಡ್​ ಮಾಡುವ ಸಂದರ್ಭದಲ್ಲಿ ಪೇಪರ್​, ಪ್ಲಾಸ್ಟಿಕ್​ಗಳೆಲ್ಲಾ ಹಾರಿ ಬಂದವು. ಅದರಿಂದ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಆ ಕ್ಷಣದಲ್ಲಿ ನಾನು ಸೂಕ್ತ ನಿರ್ಧಾರವನ್ನು ಕೈಗೊಂಡು ಹೆಲಿಕಾಪ್ಟರ್​ನ್ನ ಮತ್ತೆ ಆಗಸದೆತ್ತರಕ್ಕೆ ಹಾರಿಸಿ, ಮತ್ತೊಮ್ಮೆ ಸುತ್ತಿಕೊಂಡು ಬಂದು ಲ್ಯಾಂಡ್ ಮಾಡಬೇಕಾಯ್ತು ಎಂದಿದ್ದಾರೆ. 




ಹೆಲಿಕಾಪ್ಟರ್​ಗಳನ್ನು ಲ್ಯಾಂಡ್ ಮಾಡುವ ಸಲುವಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮೊದಲೇ ಸೂಕ್ತ ವ್ಯವಸ್ಥೆ ಮಾಡಿರುತ್ತದೆ. ಆದರೆ ಕಲಬುರಗಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್​ ನಲ್ಲಿ ಕಂಡಲೆಲ್ಲಾ ಟಾರ್ಪಲ್​ಗಳಿದ್ದವು. ಅದಕ್ಕಿಂತ ಹೆಚ್ಚಾಗಿ ರಾಶಿ ರಾಶಿ ಪೇಪರ್​ ಹಾಗೂ ಪ್ಲಾಸ್ಟಿಕ್ ಕಸಗಳು ತುಂಬಿದ್ದವು. ಇಷ್ಟೊಂದು ಅವ್ಯವಸ್ಥೆಯಾಗಿದ್ದ ಪ್ಲೇಸ್​ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರೇ ಸಿಕ್ಕಸಿಕ್ಕ ಕಸ ಆರಿಸಿ, ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಅನುಕೂಲ ಮಾಡಿಕೊಟ್ಟರು. 

ಇಂತಹ ಅವ್ಯವಸ್ಥೆಯನ್ನು ಹಾಗೆ ಇಟ್ಟು ನಿರ್ಲಕ್ಷ್ಯವಹಿಸಿದವರು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.



Leave a Reply

Your email address will not be published. Required fields are marked *