ರಿಪ್ಪನ್ಪೇಟೆ : ಕಾರಿನಲ್ಲಿ ಬಂದು ಗೋ ಕಳ್ಳತನಕ್ಕೆ ವಿಫಲ ಯತ್ನ – ವೀಡಿಯೋ ವೈರಲ್
ರಿಪ್ಪನ್ಪೇಟೆ : ಕಾರಿನಲ್ಲಿ ಬಂದು ಬೀದಿಯ ಗೋವುಗಳ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದ್ದು, ಸ್ಥಳೀಯರು ಕೂಗಿದೊಡನೆ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.
ತೀರ್ಥಹಳ್ಳಿ ರಸ್ತೆಯ ಗಾಂಧಿ ನಗರದಲ್ಲಿ ಕಾರನ್ನು ಗೋವುಗಳ ಹತ್ತಿರ ತಂದು ನಿಲ್ಲಿಸಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಗೋವುಗಳು ಕೈಗೆ ಸಿಕ್ಕಿಲ್ಲ.ಈ ಸಂಧರ್ಭದಲ್ಲಿ ಸ್ಥಳೀಯರು ಕೂಗಿದ್ದಾರೆ ನಂತರ ಎಚ್ಚೆತ್ತುಕೊಂಡ ಖದೀಮರು ಓಡಿ ಹೋಗಿದ್ದಾರೆ.
ಈ ಘಟನೆಯನ್ನು ಯಾರೋ ವೀಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪಟ್ಟಣದ ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ತೀರ್ಥಹಳ್ಳಿ ,ಶಿವಮೊಗ್ಗ ,ಉಡುಪಿ ಮತ್ತು ಮಂಗಳೂರು ಕಡೆಗಳಲ್ಲಿ ನಡೆಯುತಿದ್ದ ಇಂತಹ ಕಳ್ಳತನದ ಪ್ರಕರಣಗಳು ರಿಪ್ಪನ್ಪೇಟೆಯಲ್ಲಿ ನಡೆಯುತ್ತಿರುವುದು ಆತಂಕಕಾರಿಯಾದ ಘಟನೆಯಾಗಿದ್ದು ಪೊಲೀಸರು ಕಾರ್ಯಪ್ರವೃತ್ತರಾಗಿ ರಾತ್ರಿ ಸಮಯದಲ್ಲಿ ಸಂಚರಿಸುವ ಐಷಾರಾಮಿ ವಾಹನಗಳನ್ನು ತನಿಖೆ ನಡೆಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕಾಗಿದೆ.