ಪ್ರೀತಿಸುವಂತೆ ಮಧ್ಯ ರಸ್ತೆಯಲ್ಲಿ ವಿದ್ಯಾರ್ಥಿನಿಗೆ ಪಾಗಲ್ ಪ್ರೇಮಿಯಿಂದ ಕಿರುಕುಳ – ಆಸಿಡ್ ದಾಳಿಯ ಬೆದರಿಕೆ |ಪ್ರಕರಣ ದಾಖಲು|crime

ಶಿವಮೊಗ್ಗ ಜಿಲ್ಲೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರೀತಿಸಬೇಕು ಎಂದು ಪಾಗಲ್ ಪ್ರೇಮಿಯೊಬ್ಬ ಹಿಂಸೆ ನೀಡಿದ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. 




ವಿದ್ಯಾರ್ಥಿನಿ ಕಾಲೇಜಿನ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಆಕೆಯನ್ನು ಅಡ್ಡಗಟ್ಟಿದ ಯುವಕ ಆಕೆಗೆ ಪ್ರೀತಿಸಬೇಕು ಎಂದು ಹಿಂಸೆ ನೀಡಿದ್ದಾನೆ. ಅಲ್ಲದೆ ಪ್ರೀತಿಸದಿದ್ದರೇ ಆಸಿಡ್​ ಹಾಕುವುದಾಗಿ ಬೆದರಿಕೆಯನ್ನು ಸಹ ಒಡ್ಡಿದ್ದಾನೆ ಎನ್ನಲಾಗಿದೆ. 




ಆಕೆಯ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ಅಲ್ಲಿದ್ದ  ಸ್ಥಳೀಯರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಜನ ಸೇರುತ್ತಲೇ ಎಸ್ಕೇಪ್​ ಆಗಿರುವ ಯುವಕನನ್ನ ಸದ್ಯ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹುಡುಕುತ್ತಿದ್ದಾರೆ. 



Leave a Reply

Your email address will not be published. Required fields are marked *