ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು – ಧರ್ಮಗುರು ರೋಷನ್ ಪಿಂಟೋ
ರಿಪ್ಪನ್ಪೇಟೆ : ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಪ್ರಭು ಏಸು ಸ್ವಾಮಿಯವರ ಶುಭ ಸಂದೇಶ ಇಂದಿಗೂ ಪ್ರಸ್ತುತ ಎಂದು ಶಿವಮೊಗ್ಗ ಮಲ್ಟಿಪಲ್ ಸೋಷಿಯಲ್ ಸರ್ವಿಸ್ ನಿರ್ದೇಶಕರಾದ ಧರ್ಮಗುರು ರೋಷನ್ ಪಿಂಟೋ ಹೇಳಿದರು.
ಪಟ್ಟಣದ ಗುಡ್ ಶೆಪರ್ಡ್ ಚರ್ಚ್ ನ ವಾರ್ಷಿಕ ಹಬ್ಬದ ಅಂಗವಾಗಿ ರಿಪ್ಪನ್ಪೇಟೆಯ ವಿನಾಯಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶುಭ ಸಂದೇಶವನ್ನು ನೀಡಿದ ಅವರು ಸಮಾಜದಲ್ಲಿನ ಪ್ರತಿಯೊಬ್ಬರು ಪ್ರೀತಿಯನ್ನು ಹಂಚಿಕೊಂಡು ಕ್ಷಮೆಯಾಚನೆ ನೀಡುವುದರ ಮೂಲಕ ಜಾತಿ ಮತ ಪಂಥಗಳ ಭೇಧವನ್ನು ಮರೆತು ಸದ್ಭಾವನೆಯಿಂದ ಎಲ್ಲಾರಲ್ಲೂ ಬೆರೆತು ಸಹಕಾರ ಮನೋಭಾವನೆಯಿಂದ ಬಾಳ್ವೆಯನ್ನು ಮಾಡಿದರೆ ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭದ್ರಾವತಿ ಧರ್ಮಾಧ್ಯಕ್ಷರಾದ ಜೋಸೆಫ್ ಅರಮಚ್ಚಾಡತ್ ,ಆನವಟ್ಟಿ ಧರ್ಮಗುರು ಮ್ಯಾಥ್ಯೂ ಎಂ ಸಿ ಬಿ ಎಸ್ , ಧರ್ಮಗುರು ಲಿಬಿನ್ ಹಾಗೂ ರಿಪ್ಪನ್ಪೇಟೆ ಗುಡ್ ಶೆಪರ್ಡ್ ಧರ್ಮಗುರು ಬಿನೋಯ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸೆಬಾಸ್ಟಿಯನ್ ಮ್ಯಾಥ್ಯೂಸ್ ನಿರೂಪಿಸಿದರು.
ಇದಕ್ಕೂ ಮುನ್ನ ಗುಡ್ ಶೆಪರ್ಡ್ ಚರ್ಚ್ ನಿಂದ  ವಿನಾಯಕ ವೃತ್ತದವರೆಗೆ ಏಸು ಕ್ರಿಸ್ತರ ಪ್ರತಿಮೆಯನ್ನು ಮೆರವಣಿಗೆಯ ಮೂಲಕ ಭಕ್ತಿಗಾನಗಳಿಂದ ತರಲಾಯಿತು.
ಈ ಮೆರವಣಿಗೆಯಲ್ಲಿ ರಿಪ್ಪನ್ಪೇಟೆ ಸೇರಿದಂತೆ ಸಾಗರ ,ಶಿವಮೊಗ್ಗ, ಸಾಗರ,ಹೊಸನಗರದಿಂದ ಆಗಮಿಸಿದ ನೂರಾರು ಭಕ್ತರು ಪಾಲ್ಗೊಂಡಿದರು.
ರಿಪ್ಪನ್ಪೇಟೆ ಗುಡ್ ಶೆಪರ್ಡ್ ಫೋರೋನ ದೇವಾಲಯದ ಧರ್ಮಗುರು ಬಿನೋಯ್ ರವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮ ,ಮೆರವಣಿಗೆ ಸಾಂಗವಾಗಿ ನಡೆಯಿತು.
 
                         
                         
                         
                         
                         
                         
                         
                         
                         
                        