ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಹೆಸರಿಡುವಂತೆ ಜೆಡಿಎಸ್ ಆಗ್ರಹ
ರಿಪ್ಪನ್‌ಪೇಟೆ : ಇದೇ 27 ರಂದು ಪ್ರಧಾನಿ ನರೇಂದ್ರ ಮೋದಿ ಯಿಂದ ಲೋಕಾರ್ಪಣೆಗೊಳ್ಳಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಹೆಸರಿಡುವುದು ಸೂಕ್ತ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದ್ದು, ರಾಷ್ಟ್ರ ಕವಿ ಕುವೆಂಪು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಪರ್ವತ ಶ್ರೇಣಿ ತಪ್ಪಲಿನ ತೀರ್ಥಹಳ್ಳಿಯವರಾಗಿದ್ದು ಕನ್ನಡ ನಾಡು ನುಡಿಗೆ ಅವರ ಸೇವೆ ಅನನ್ಯ ಅಂಥಹ ವ್ಯಕ್ತಿಯ ಜಿಲ್ಲೆಯಲ್ಲಿ ನೂತನವಾಗಿ ತಲೆ ಎತ್ತಿರುವ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು ಸೂಕ್ತ ಸಮಯೋಚಿತ ನಿರ್ಧಾರವಾಗಿದೆ.
ಕುವೆಂಪು ರವರ ವಾಣಿ “ಸರ್ವಜನಾಂಗದ ಶಾಂತಿಯ ತೋಟ” ಎಂಬ ನಾಣ್ಣುಡಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಾರ್ವಜನಿಕರ ಉಪಯುಕ್ತ ಸಂಚಾರ ವ್ಯವಸ್ಥೆಗೆ ಸಾಕ್ಷಿಯಾಗಲಿದೆ ಎಂದು ವರ್ಣಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುಲಾಗಿದೆ ಎಂದರು.