ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಮತ್ತು ಶಿವಪುರ ಗ್ರಾಮದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆದವಟ್ಟಿ ಗ್ರಾಮದ ಲೋಹೀತ್ ಫಕೀರಪ್ಪ( ಸುಮಾರು 25 ವರ್ಷ) ಹಾಗೂ ಶಿವಪುರ ಗ್ರಾಮದ ಶ್ರೀನಿವಾಸ ಮಾರುತಿ ( ಸುಮಾರು 25 ವರ್ಷ) ಮೃತ ದುರ್ಧೈವಿಗಳು.
ಶಿರಾಳಕೊಪ್ಪದಿಂದ ಸೊರಬ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ ಸೊರಬದಿಂದ ಶಿರಾಳಕೊಪ್ಪ ಮಾರ್ಗವಾಗಿ ತೆರಳುತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.