ರಿಪ್ಪನ್‌ಪೇಟೆ : ಶ್ರೀಮಂತರ ಮತ್ತು ಸರ್ಕಾರಿ ನೌಕರರ ಅಧಿಕಾರಿಗಳ ಮಕ್ಕಳ ಮುಂದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸ್ಪರ್ಧಾತ್ಮಕ ಪೈಪೋಟಿ ನಡೆಸಬೇಕಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರೊಂದಿಗೆ ಬೌದ್ಧಿಕ ಬೆಳವಣಿಗಗೆ ಸಹಕಾರಿಯಾಗಬೇಕು ಎಂದು ಶಾಸಕ ಹರತಾಳು ಹಾಲಪ್ಪ ಕರೆ ನೀಡಿದರು.
ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಗುರುಗಳ, ತಂದೆ-ತಾಯಿಯರ ಪೋಷಕರ ಮಾರ್ಗದರ್ಶನದೊಂದಿಗೆ ಶಿಸ್ತುಬದ್ದ ಬದುಕಿಗೆ ಸರಿಯಾದ ಮಾರ್ಗದರ್ಶನ ಕೊಡಿಸಬೇಕು. ಇಲ್ಲದಿದ್ದರೆ ಭಾರಿ ಸಂಕಷ್ಟ ಎದುರಿಸಬೇಕಾಗುವುದು. ಕಳೆದ ಎರಡು ವರ್ಷದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಸಾಕಷ್ಟು ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ದೂರು ಉಳಿಯಬೇಕಾದ ಪರಿಸ್ಥಿತಿ ಎದುರಾಗಿತ್ತು ಈಗ ಅಂತಹ ಪರಿಸ್ಥಿತಿಯಿಲ್ಲ,ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಸಾಂಸ್ಕೃತಿಕ ಚಟುವಟಿಯಲ್ಲಿ ಉಪನ್ಯಾಸಕರುಗಳು ತೊಡಗಿಕೊಳ್ಳುವುದರ ಬದಲು ವಿದ್ಯಾರ್ಥಿಗಳನ್ನು ಸಿದ್ದಪಡಿಸಿ ಅವರಿಂದಲೇ ಮಾಡಿಸಿದಾಗ ಅವರಿಗೂ ವೇದಿಕೆಯಲ್ಲಿ ನಿಂತು ಮಾತನಾಡುವ ಧೈರ್ಯ ಬರುವುದು ಎಂದು ಹೇಳಿದರು.
ಮುಂದಿನ ವರ್ಷದಲ್ಲಿ ನಾನೇ ಪುನಃ ಈ ಕ್ಷೇತ್ರದ ಶಾಸಕನಾಗಿ ಬರುತ್ತೇನೆ ಅಂದಿನ ಸಮಾರೋಪದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೇ ಈ ಎಲ್ಲವನ್ನು ನಿರ್ವಹಿಸುವ ಜವಬ್ದಾರಿಯನ್ನು ಮಾಡುವಂತಾಗಲಿ ಎಂದು ಪ್ರಾಚಾರ್ಯರಿಗೆ ಮತ್ತು ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾಲೇಜ್ ಉಪನಿರ್ದೇಶಕ ಬಿ.ಕೃಷ್ಣಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು.
ಕಾಲೇಜಿನ ಪ್ರಾಚಾರ್ಯ ವಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ.ಅ.ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ ಸಿಡಿಸಿ ಉಪಾಧ್ಯಕ್ಷ ದೇವೇಂದ್ರಪ್ಪಗೌಡ ನೆವಟೂರು, ಸಿಡಿಸಿ ಸದಸ್ಯರಾದ ಎಂ.ಸುರೇಶ್‌ಸಿಂಗ್, ಶಾಂತಕುಮಾರ್, ಬಿ.ಶಿವಾನಂದ, ವಿನೋದಾ, ಸವಿತಾ ಜಗದೀಶ್ ಇನ್ನಿತರರು ಹಾಜರಿದ್ದರು.
ಉಪನ್ಯಾಸಕ ವಾಸುದೇವ ಸ್ವಾಗತಿಸಿದರು. ಅಂಬಿಕಾ ಮತ್ತು ಸಬಾಸ್ಟಿನ್ ಮ್ಯಾಥ್ಯೂಸ್ ನಿರೂಪಿಸಿದರು. ವಾರ್ಷಿಕ ವರದಿಯನ್ನು ಅರುಣ್‌ರಾಜ್ ಮಂಡಿಸಿದರು. ರಾಜೇಶ್ ಬೋಳಾರ್ ವಂದಿಸಿದರು.