ರಿಪ್ಪನ್‌ಪೇಟೆಯಲ್ಲಿ ಹಾನಗಲ್ ಕುಮಾರೇಶ್ವರ ರಥಯಾತ್ರೆಗೆ ಅದ್ದೂರಿ ಸ್ವಾಗತ|Viraagi

ರಿಪ್ಪನ್‌ಪೇಟೆ : ಹಾನಗಲ್ ಶ್ರೀ ಗುರುಕುಮಾರೇಶ್ವರ ಶಿವಯೋಗಿಗಳ ಕುರಿತು ಜನವರಿ ೧೨ ರಂದು ಬಿಡುಗಡೆಯಾಗಲಿರುವ ವಿರಾಟಪುರ ವಿರಾಗಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಶ್ರೀ ಕುಮಾರೇಶ್ವರ ರಥ ಯಾತ್ರೆ ನಾಡಿನ ವ್ಯಾಪ್ತಿ ಸಂಚರಿಸುತ್ತಿದ್ದು ಇಂದು ಅನಂದಪುರ ಮಾರ್ಗವಾಗಿ ರಥವು ರಿಪ್ಪನ್‌ಪೇಟೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.




ಸಾಗರ ರಸ್ತೆಯ ಒಕ್ಕಲಿಗರ ಸಮುದಾಯ ಭವನದ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಬೈಕ್ ರ‍್ಯಾಲಿ ಮೂಲಕ ವಿನಾಯಕ ವೃತ್ತದ ಮೂಲಕ ಭೂಪಾಳಂ ಚಂದ್ರಶೇಖರಯ್ಯ ಸಬಾಭವನಕ್ಕೆ ಕರೆ ತರಲಾಯಿತು.


ಭೂಪಾಳಂ ಚಂದ್ರಶೇಖರಯ್ಯ ಸಬಾಭವನದಲ್ಲಿ ಹತ್ತು ನಿಮಿಷದ ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಜಿಯವರ ಟೀಸರ್ ಪ್ರದರ್ಶ ಮಾಡಲಾಯಿತು.

ಜಡೆ ಮಠದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಅಶಿರ್ವಚನ ನೀಡಿ ಹಾನಗಲ್ ಕುಮಾರ ಶಿವಯೋಗಿಗಳು ೧೨೦ ವರ್ಷಗಳ ಹಿಂದೆ ಅಖಿಲ ಭಾರತ ವೀರಶೈವ ಲಿಂಗಾಯಿತಮಹಾಸಭಾವನ್ನು ಸ್ಥಾಪನೆ ಮಾಡಿ ಸಮಾಜದ ಎಲ್ಲರನ್ನು ಒಂದು ಗೂಡಿಸಿ ಮಹಾನ್ ಚೇತನ-ಪೂಜ್ಯರು ಅರೋಗ್ಯ ಪೂರ್ಣ ಸಮಾಜ ನಿರ್ಮಿಸುವ ಮಹದಾಸೆಹೊಂದಿ ಅಂಧರಿಗೆ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಅಧ್ಯತೆ ನೀಡಿ ಲಿಂಗಾಯತರು ಧರಿಸುವ ಭಸ್ಮ ಘಟಕವನ್ನು ಸ್ಥಾಪನೆ ಮಾಡಿ ಸ್ವಾವಲಂಭಿ ಬದುಕಿಗೆ ನಾಂದಿಯಾದರು ಎಂದರು.




ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಆಭಿನವ ಚನ್ನಬಸವರ ಮಹಾಸ್ವಾಮಿಜಿ ಉಪದೇಶಾಮೃತ ನೀಡಿ ಸಮಾಜದ ಒಳಿತಿಗೆ ಹಾನಗಲ್ ಕುಮಾರೇಶ್ವರ ಸ್ವಾಮಿಗಳ ಕೊಡುಗೆ ಅಗಾಧ ವಾಗಿದೆ.ಸಮಾಜಕ್ಕೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿದವರು ಇವರು ಸಮುದಾಯದ ಜನರಿಗೆ ಶತಮಾನಗಳ ಹಿಂದೆ ಜ್ಞಾನದ ಅರಿವು ಕಲಿಸಿದ ಕೀರ್ತಿ ಸಹ ಇವರಿಗೆ ಸಲ್ಲಬೇಕು.ಗುರು ವಿರಕ್ತ ಮಠಾಧೀಶರಿಗೆ ಸಂಸ್ಕೃತ ವೇದ ಅಧ್ಯಯನ ಮತ್ತು ಪೂಜಾ ವಿಧಿ ವಿಧಾನವನ್ನು ಕಲಿಸುವ ವಿಶ್ವವಿದ್ಯಾಲಯವೇ ಶ್ರೀ ಗುರುಕುಮಾರೇಶ್ವರ ಮಹಾಸ್ವಾಮಿಜಿಯವರದ್ದಾಗಿದೆ ಎಂದರು.

ಈ ಸಂಧರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಆರ್.ಎ.ಚಾಬುಸಾಬ್,ಎಂ.ಬಿ.ಮಂಜುನಾಥ ಎನ್.ವರ್ತೇಶ್, ಎಂ.ಡಿ.ಇಂದಿರಮ್ಮ ಜಿ.ಎಸ್.ಚಂದ್ರಪ್ಪ,ಬೆಳಕೋಡು ಹಾಲಸ್ವಾಮಿ,, ಹೆಚ್.ವಿ.ಈಶ್ವರಪ್ಪಗೌಡ,ಬಿ.ಹೆಚ್.ಸ್ವಾಮಿಗೌಡ ಬೆಳಂದೂರು,ಲೀಲಾ ಶಂಕರ್,ತೀರ್ಥೇಶ್ ಹಾಗೂ ಇತರರು ಇದ್ದರು.

ರಾಜು ದೂನ ಸ್ವಾಗತಿಸಿದರು.ಕಗ್ಗಲಿ ಶಿವಪ್ರಕಾಶ್ ಪಾಟೀಲ್ ವಂದಿಸಿದರು.



Leave a Reply

Your email address will not be published. Required fields are marked *