ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯ ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿಯಾಗಿದ್ದೂ, ಕೆಲ ಶಾಲಾ ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಂದಾಜು 18 ಜನ ಮಕ್ಕಳು ಹಾಗೂ ಎಂಟು ಜನ ಶಿಕ್ಷಕರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತರಲಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪ್ರೌಢ ಶಾಲಾ ಮಕ್ಕಳು ಪ್ರವಾಸಕ್ಕೆ ಬಂದ ಸಂಧರ್ಭದಲ್ಲಿ ಘಟನೆ ನಡೆದಿದ್ದು ಅಂದಾಜು 60 ಜನ ವಿದ್ಯಾರ್ಥಿಗಳಿದ್ದರೂ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತಕ್ಕೆ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ ಪ್ರವಾಸದ ವಿದ್ಯಾರ್ಥಿಗಳಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ .
ಮಾಹಿತಿ – ಓಂಕಾರ್ ತಾಳಗುಪ್ಪ