POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ : ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಮೆರವಣಿಗೆಗೆ ಮೆರುಗು ನೀಡಿದ ಎತ್ತಿನಗಾಡಿ|Ripponpet

ರಿಪ್ಪನ್‌ಪೇಟೆ: ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘ ಶುಕ್ರವಾರ  ಆಯೋಜಿಸಿದ್ದ   67ನೇ ಕರ್ನಾಟಕ  ರಾಜ್ಯೋತ್ಸವದ ಅದ್ಧೂರಿ ಕನ್ನಡ  ಸಂಭ್ರಮ ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಹಾಗೂ ಜಟಕಾ ಬಂಡಿ ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು .


ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ರಾಮಚಂದ್ರ (ಗ್ಯಾರೇಜ್ ರಾಮು) ಕನ್ನಡ ಧ್ವಜಾರೋಹಣ ನೆರವೇರಿಸಿದರು.


ಬೆಳಿಗ್ಗೆ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರೆಗೆ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಚಾಲನೆ ನೀಡಿದರು.ಈ ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ಶ್ರೀಜಿತ್ ರವರ ಜಟಕಾ ಬಂಡಿ,ವಿವಿಧ ಶಾಲಾ ಕಾಲೇಜುಗಳ ವಾದ್ಯ ಘೋಷ್  ಮೆರವಣಿಗೆಗೆ  ಸಾಥ್ ನೀಡಿದವು .


 ತೆರೆದ ವಾಹನದಲ್ಲಿ  ಅನಾವರಣಗೊಂಡ ಭಾರೀ ಗಾತ್ರದ ತಾಯಿ ಭುವನೇಶ್ವರಿ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರ  ಹಾಗೂ  ರಾಷ್ಟ್ರ ಶಕ, ಪುರುಷರ ವಿವಿಧ ವೇಷ ಭೂಷಣಗಳ ಧಿರಿಸು  ತೊಟ್ಟು ಸಂಭ್ರಮಿಸಿದ ಪುಟಾಣಿಗಳ ಸಾಲು , ಸಹಸ್ರಾರು ಸಂಖ್ಯೆಯ ಶಾಲಾ, ಕಾಲೇಜು  ವಿದ್ಯಾರ್ಥಿಗಳ ಪಥಸಂಚಲನದ ಅಕರ್ಷಣೆಯ ಮೆರವಣಿಗೆ  ದಾರಿಹೋಕರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.


ರಾಮಕೃಷ್ಣ ವಿದ್ಯಾಲಯದ ಮಕ್ಕಳು ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

ವಿನಾಯಕ ವೃತ್ತದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್,ಸಂಘದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ,ಸಮಿತಿಯ ಪ್ರಮುಖರಾದ ಎಂ ಬಿ ಮಂಜುನಾಥ್, ಸುರೇಶ್ ಸಿಂಗ್,ಆರ್ ಟಿ ಗೋಪಾಲ್ ,ಎನ್ ಸತೀಶ್ ,
,ಗಣೇಶ್ ಕಾಮತ್,ಉಮಾ ಸುರೇಶ್ ,ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ ,ಸದಸ್ಯರಾದ ಪಿ ರಮೇಶ್, ದೀಪಾ ಸುಧೀರ್ ,ಅಶ್ವಿನಿ ರವಿಶಂಕರ್ ,ಆಸೀಫ಼್ ಭಾಷಾಸಾಬ್, ಗಣಪತಿ ,ಧನಲಕ್ಷ್ಮಿ ಮುಖಂಡರಾದ ಲೀಲಾಶಂಕರ್ ,ಪದ್ಮಾ ಸುರೇಶ್,ಲಕ್ಷ್ಮಿ ಶ್ರೀನಿವಾಸ್ ,ಶೈಲಾ ಆರ್ ಪ್ರಭು ,ಅರುಣ್ ಕಾಳಾಮುಖಿ, ಶ್ವೇತಾ ಹಾಗೂ ಪಿಎಸ್ ಐ ಶಿವಾನಂದ ಕೋಳಿ  ಮತ್ತು ಸಿಬ್ಬಂದಿ ವರ್ಗ  ಸೇರಿದಂತೆ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು ,  ವಿವಿಧ ಸಂಘ ಸಂಸ್ಥೆಗಳ ಮತ್ತು ಸರ್ಕಾರಿ ಹಾಗೂ ಖಾಸಗಿ  ಶಾಲಾ ಕಾಲೇಜ್  ಶಿಕ್ಷಣ ಸಂಸ್ಥೆಯ ಪ್ರಮುಖರು ಕರ್ನಾಟಕ  ರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.