ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನಾಳೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಶಿವಮೊಗ್ಗಕ್ಕೆ ಆಗಮಿಸಿ ಸಂಜೆ ಬೆಂಗಳೂರಿಗೆ ನಿರ್ಗಮಿಸುತ್ತಿದ್ದಾರೆ.
ನವೆಂಬರ್ 25 ರ ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 1.50 ಕ್ಕೆ ಶಿವಮೊಗ್ಗದ ಸಕ್ರ್ಯೂಟ್ ಹೌಸ್ ಹೆಲಿಪ್ಯಾಡ್ ತಲುಪುವರು.
ನಂತರ ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ 4.15 ಕ್ಕೆ ಸಕ್ರ್ಯೂಟ್ ಹೌಸ್ ಹೆಲಿಪ್ಯಾಡ್‍ನಿಂದ ಹೊರಟು ಸಂಜೆ 5.35 ಕ್ಕೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣ ತಲುಪುವರು ಎಂದು ಪ್ರಕಟಣೆ ತಿಳಿಸಿದೆ.