ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ರೋಗಿಯ ಕಡೆಯವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಮಮ್ತಕೀಮ್ ಎಂಬಾತನನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಆಯನೂರಿನ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಶೀದ್ (65) ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ನಂತರ ಅವರನ್ನು ಮತ್ತೆ ಮೆಗ್ಗಾನ್ ಗೆ ದಾಖಲಿಸಿದ್ದರು ಆದರೆ ಭಾನುವಾರ ರಾತ್ರಿ ಅಬ್ದುಲ್ ರಶೀದ್ ಮೃತಪಟ್ಟಿದ್ದಾರೆ.
ರಶೀದ್ ಮೃತಪಟ್ಟಿರುವುದು ಮೆಗ್ಗಾನ್ ವೈದ್ಯರ ನಿರ್ಲಕ್ಷದಿಂದ ಎಂದು ಆರೋಪಿಸಿ ಮೃತನ ಸಂಬಂಧಿಕರು ಮಹಿಳಾ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವಿಚಾರವಾಗಿ ಮುಮ್ತಕೀನ್ ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದತಕ್ಷಣ ಡ್ಯೂಟಿ ಮಾಡುತ್ತಿದ್ದ ವೈದ್ಯರೆಲ್ಲಾ ಕರ್ತವ್ಯ ತ್ಯಜಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ದೊಡ್ಡಪೇಟೆ ಪಿಐ ಅಂಜನ್ ಕುಮಾರ್, ಡೀನ್ ಡಾ.ವಿರುಪಾಕ್ಷಪ್ಪ, ಮೆಗ್ಗಾನ್ ಅಧೀಕ್ಷಕ ಡಾ.ಶ್ರೀಧರ್ ಮೊದಲಾದವರು ಸ್ಥಳಕ್ಕೆ ಧಾವಿಸಿದ್ದಾರೆ.
ಡ್ಯೂಟಿ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು, ಸಿಬ್ಬಂದಿಗಳ ಕೊರತೆಯನ್ನನೀಗಿಸಬೇಕು ಸೇರಿದಂತೆ ಮುಷ್ಕರ ನಿರತ ವೈದ್ಯರು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
ವೈದ್ಯರ ಒತ್ತಾಸೆಯ ಮೇರೆಗೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲು ಕೆಲವು ನಿರ್ಧಾರವನ್ನ ಕೈಗೊಳ್ಳಲಾಗಿದೆ.