ಗುರುವಾರ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಸಮೀಪ ಅಕ್ರಮವಾಗಿ ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪಟಗುಪ್ಪ ಸೇರುವೆ ಬಳಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ KA 19 B 7450 ಮತ್ತು KA 15 8294 ನೋಂದಣಿ ಸಂಖ್ಯೆಯ ಎರಡು ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಆರ್ಎಫ್ಓ ಎಂ. ರಾಘವೇಂದ್ರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಉಪ ವಲಯ ಅರಣ್ಯಧಿಕಾರಿ ಯುವರಾಜ್, ಮೌನೇಶ್ ಬಿರದಾರ್, ಅರಣ್ಯ ರಕ್ಷಕ ಸುರೇಶ್, ಚಾಲಕ ಜಗದೀಶ್ ಪಾಲ್ಗೊಂಡಿದ್ದರು.
ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಮೈಚಳಿ ಬಿಟ್ಟು ಅಕ್ರಮ ಮರಳು ಮಾಫ಼ಿಯಾಗಳ ಹೆಡೆಮುರಿ ಕಟ್ಟುತ್ತಿರುವುದು ಜನಸಾಮಾನ್ಯರಲ್ಲಿ ಸಂತಸ ತಂದಿದೆ.
“ಹಾಗೇಯೆ ಸಕ್ರಮವಾಗಿ ಮರಳನ್ನು ಸಾಗಿಸುವ ಲಾರಿ ಮಾಲೀಕರು,ನೂರಾರು ಸಂಖ್ಯೆಯ ಕಾರ್ಮಿಕರು ಈಗಿನ ಮರಳು ನೀತಿಯಿಂದ ಕಂಗೆಟ್ಟಿದ್ದು ವಿಷ ಕುಡಿಯುವಂತಹ ಪರಿಸ್ಥಿತಿಯಲ್ಲಿದ್ದಾರೆ ನಮ್ಮನ್ನಾಳುವ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ತಾಲೂಕಿನಲ್ಲಿ ಸೂಕ್ತ ಮರಳು ನೀತಿ ಜಾರಿಗೊಳಿಸಿ ನೂರಾರು ಕುಟುಂಬಗಳಿಗೆ ಆಸರೆಯಾಗಬೇಕಾಗಿದೆ ಎನ್ನುವುದು ಪೋಸ್ಟ್ ಮ್ಯಾನ್ ನ್ಯೂಸ್ ನ ಆಶಯ……..“