ತೀರ್ಥಹಳ್ಳಿ : ಸಾರ್ವಜನಿಕ ಸ್ಥಳದಲ್ಲಿ ಸ್ನೇಹಿತರೇ ಪರಸ್ಪರ ಗಲಾಟೆ ಮಾಡಿಕೊಳ್ಳುತಿದ್ದಾಗ ಬಿಡಿಸಲು ಹೋದ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ದ್ವಿಚಕ್ರ ವಾಹನವನ್ನ ಹರಿಯಬಿಟ್ಟು ಪರಾರಿಯಾಗಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿಯ ಮೂಡ್ ಹೋಟೆಲ್ ಬಳಿ ಯುವಕರು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆಯಲ್ಲಿ ತೊಡಗಿಕೊಂಡಿರುತ್ತಾರೆ. ಈ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ದಾವಿಸಿದ ಪೊಲೀಸ್ ಕಾನ್ ಸ್ಟೇಬಲ್ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಯುವಕರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಪೊಲಿಸ್ ಕಾನ್ ಸ್ಟೇಬಲ್ ತಾವು ಬಂದಿದ್ದ ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ.ಈ ಸಂಧರ್ಭದಲ್ಲಿ ಶಂಕರ್ ಗುಡ್ಡದ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರು ವಾಪಸ್ ಬೈಕ್ ತಿರುಗಿಸಿಕೊಂಡು ಬಂದು “ನಾವು ಗಲಾಟೆ ಮಾಡಿಕೊಂಡ್ರೆ ಈ ಪೊಲೀಸರಿಗೆ ಏನ್ರೋ…?” ಎಂದು ಕೂಗುತ್ತ ಕಾನ್ ಸ್ಟೇಬಲ್ ಗೆ ಡಿಕ್ಕಿ ಹೊಡೆದಿದ್ದಾರೆ. ಕಾನ್ ಸ್ಟೇಬಲ್ ಕಾಲಿಗೆ ಬಲವಾಗಿ ಹೊಡೆತ ಬಿದ್ದಿದೆ.
ಗಲಾಟೆ ಬಿಡಿಸಲು ಬಂದ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಿಖಲ್ ಗ್ಯಾಂಗ್ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗಾಯಗೊಂಡ ಕಾನ್ ಸ್ಟೇಬಲ್ ದೀಪಕ್ ರನ್ನ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.