ಶಿವಮೊಗ್ಗದ ಮಲ್ಲಿಗೇನಹಳ್ಳಿಯಲ್ಲಿ ಅಕ್ರಮ ಮನೆ ತೆರವು ಕಾರ್ಯಚರಣೆ ನಡೆಸಿ ಮನೆಗಳನ್ನ ನೆಲಸಮ ಗೊಳಿಸಲಾಗಿದೆ. ಕಾರ್ಯಾಚರಣೆಗೆ ಅಡ್ಡ ಬಂದವರನ್ನು ವಶಕ್ಕೆ ಪಡೆದು ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ.
ಮಲ್ಲಿಗೇನಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಪ್ಪರ್ ತುಂಗ ಜಾಗದಲ್ಲಿ ಇಲ್ಲಿನ ಹಕ್ಲಿಪಿಕ್ಕಿ ಜನ ಅಕ್ರಮ ಮನೆ ನಿರ್ಮಿಸಿಕೊಂಡಿದ್ದು ಅವರನ್ನು ತೆರವುಗೊಳಿಸಲು ಯುಟಿಪಿ ಇಲಾಖೆ ಅನೇಕ ಬಾರಿ ನೋಟೀಸ್ ನೀಡಲಾಗಿತ್ತು.ಆದರೆ ನೋಟೀಸ್ ಗೆ ಉತ್ತರ ನೀಡಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮಗೆ 6 ತಿಂಗಳು ಕಾಲಾವಕಾಶಕೊಡಿ ಕಾಲಾವಕಾಶ ನೀಡಿದ ನಂತರ ವಸತಿ ಸಚಿವರಿಂದಲೇ ಅನುಮತಿ ತರಲಿದ್ದೇವೆ ಎಂದು ಕೇಳಿಕೊಂಡರು ಅಧಿಕಾರಿಗಳು ಕೇಳಿಸಿಕೊಳ್ಳದೇ ನಿಮಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಕೋರ್ಟ್ ನಿಂದ ತಡೆಯಾಜ್ಞೆನೂ ತಂದಿಲ್ಲ. ನಮ್ಮ ತೆರವು ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಹೇಳಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದರು.
ಪ್ರತಿಭಟನಾನಿರತರನ್ನು ವಶಕ್ಕೆ ಪಡೆಯಲಾಯಿತು.ಈ ಮಧ್ಯೆ ವ್ಯಕ್ತಿಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದು ಪೊಲೀಸರು ಅವರನ್ನೂ ವಶಕ್ಕೆ ಪಡೆದರು.
ಈ ಮಧ್ಯೆ ಏಕಾಏಕಿ ಮನೆ ತೆರವು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೀವೇನು ಕೋರ್ಟ್ ಆದೇಶ ಪಾಲಿಸುತ್ತಿದ್ದೀರಿ, ನಿಮಗೆ ಪ್ರತಿ ತಿಂಗಳು 1 ನೇ ತಾರೀಖು ಸಂಬಳ ಬರುತ್ತದೆ. ಈ ಜನ ಎಲ್ಲಿಗೆ ಹೋಗಬೇಕು. ಒಂದು ಹೊತ್ತು ಅನ್ನಕ್ಕೂ ಪರದಾಡುತ್ತಾರೆ. ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಲಾಗಿದೆ. 8-10 ವರ್ಷದಿಂದ ವಾಸವಾಗಿದ್ದಾರೆ. ಈಗ ಏಕಾಏಕಿ ತೆರವುಗೊಳೊಸಲು ಮುಂದಾದರೆ ಹೇಗೆ ಎಂದು ಆಕ್ರೋಶಿತರಾದರು.ಇವರ ಬಗ್ಗೆ ಚಿಂತಿಸುವುದಕ್ಕಾಗಿಯೇ ಸ್ಲಂ ಬೋರ್ಡ್ ಇದೆ. ಸ್ಲಂಬೋರ್ಡ್ ಅಧಿಕಾರಿಗಳ ಜೊತೆ ಮಾತನಾಡುವೆ ಎಂದರು.
ಸರ್ವೆ ನಂಬರ್ 19, 18 ಮತ್ತು 26 ರಲ್ಲಿ ಸೇರಿ 450 ಮನೆಗಳಿವೆ ಸರ್ವೆ ನಂಬರ್ 18 ಮತ್ತು26 ರಲ್ಲಿ ಎಲ್ಲ ಸರಿ ಇವೆ. ಸರ್ವೆ ನಂಬರ್ 19 ರಲ್ಲಿ 150-200 ಮನೆ ಅಕ್ರಮವಾಗಿದೆ ಎಂದು ನೋಟೀಸ್ ನೀಡಲಾಗಿದೆ.