ರಿಪ್ಪನ್ ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ರಿಪ್ಪನ್ ಪೇಟೆಯ ಎಂ. ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಗೆಲುವು ದೊರೆತಿದೆ.
15 ಜನ ನಿರ್ದೇಶಕರನ್ನು ಹೊಂದಿರುವ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗರ್ತಿಕೆರೆ, ಹೆದ್ದಾರಿಪುರ, ಗುಬ್ಬಿಗ ಮತ ಕ್ಷೇತ್ರದಿಂದ ಮೂರು ಜನ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 12 ಸ್ಥಾನಗಳಿಗಾಗಿ 27 ಜನ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದರು.
ಹೊಸನಗರ ತಾಲೂಕು ಒಕ್ಕಲಿಗರ ಸಂಘಕ್ಕೆ ಇದು ಪ್ರಥಮ ಚುನಾವಣೆ :
ಈ ಬಾರಿಯ ಒಕ್ಕಲಿಗರ ಸಂಘದ ಚುನಾವಣೆ ತೀವ್ರ ಕುತೂಹಲ, ರೋಚಕ ಹಾಗೂ ಹಣಾಹಣಿಯಿಂದ ಕೂಡಿತ್ತು.35 ವರ್ಷಕ್ಕಿಂತಲೂ ಅಧಿಕ ಇತಿಹಾಸವನ್ನು ಹೊಂದಿರುವ ಹೊಸನಗರ ತಾಲೂಕು ಒಕ್ಕಲಿಗರ ಸಂಘಕ್ಕೆ ಇದು ಪ್ರಥಮ ಚುನಾವಣೆಯಾಗಿದ್ದು. ಈ ಹಿಂದೆ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು, ಒಕ್ಕಲಿಗರ ಸಂಘದ ಕೆಲವು ನಿರ್ದೇಶಕರು ಹಾಗೂ ಸದಸ್ಯರುಗಳು ಈ ಬಾರಿ ಚುನಾವಣೆ ನಡೆಸಲೇಬೇಕೆಂಬ ಹಠಕ್ಕೆ ಬಿದ್ದ ಕಾರಣ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಸಲು ಒಕ್ಕಲಿಗರ ಸಂಘದಲ್ಲಿ ತೀರ್ಮಾನವಾದ ಹಿನ್ನೆಲೆಯಲ್ಲಿ ಸಪ್ಟೆಂಬರ್ 4ರಂದು ರಿಪ್ಪನ್ ಪೇಟೆಯ ವಿಶ್ವಮಾನ ಭವನದಲ್ಲಿ ಚುನಾವಣೆ ನಡೆಸಲಾಯಿತು.
ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ ಲಕ್ಷ್ಮಣಗೌಡ ಹಾಗೂ ಎಂ ಎಂ ಪರಮೇಶ್ ತಂಡದಿಂದ ಕಣಕ್ಕಿಳಿದ ಅಭ್ಯರ್ಥಿಗಳು ಮೊಟ್ಟಮೊದಲ ಬಾರಿಗೆ ನಡೆದ ಒಕ್ಕಲಿಗರ ಸಂಘದ 12 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 9 ಸ್ಥಾನಗಳನ್ನು ಪಡೆದು ಜಯಭೇರಿ ಗಳಿಸಿದ್ದಾರೆ.
ವಿಜೇತರ ವಿವರ :
ಹಾಲೂಗುಡ್ಡೆ ಕ್ಷೇತ್ರದಿಂದ ಹೆಚ್,ಹೆಚ್ ಪುರುಷೋತ್ತಮ್, ಹೆಚ್ ವಿ ರಾಜೇಶ್, ಹರೀಶ್ ಹೆಚ್, ವಿ,. ವೆಂಕಟೇಶ್.ರಿಪ್ಪನ್‌ಪೇಟೆ ಕ್ಷೇತ್ರದಿಂದ ಎಂ.ಬಿ ಲಕ್ಷ್ಮಣಗೌಡ, ಎಂ ಎಂ ಪರಮೇಶ್, ಕೆರೆಹಳ್ಳಿ ಕ್ಷೇತ್ರದಿಂದ ಬಿ ಹೆಚ್ ಷಣ್ಮುಖಪ್ಪ ಗೌಡ, ಕೋಟೆತಾರಿಗ ಕ್ಷೇತ್ರದಿಂದ ಮಹೇಶ್, ಮಂಜುನಾಥ್, ಹೆದ್ದಾರಿಪುರ ಕ್ಷೇತ್ರದಿಂದ ಎಚ್ ಪಿ ರಾಜೇಶ್, ಕಲ್ಲೂರು ಕ್ಷೇತ್ರದಿಂದ ಈ.ಡಿ ಮಂಜುನಾಥ್ ಕೆ ಸಿ ತೇಜಮೂರ್ತಿ ಗುಬ್ಬಿಗ ಕ್ಷೇತ್ರದಿಂದ ದಿನೇಶ್, ಗರ್ತಿಕೆರೆ ಕ್ಷೇತ್ರದಿಂದ ಕೃಷ್ಣಮೂರ್ತಿ, ಬುಕ್ಕಿವರೆ ಕ್ಷೇತ್ರದಿಂದ ಸಿ ಸತೀಶ್. ಆಯ್ಕೆಯಾಗಿದ್ದಾರೆ.
ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಚುನಾವಣೆಯ ಅಧಿಕಾರಿಗಳು:
17 ದಿನಗಳ ಕಾಲ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಚುನಾವಣೆಯ ಅಧಿಕಾರಿಯಾಗಿ ವಕೀಲರಾದ ಚಿಕ್ಕಜೇನಿ ರಾಮಚಂದ್ರ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ನಿಕಟಪೂರ್ವ ಮುಖ್ಯ ಶಿಕ್ಷಕ ಹೆಚ್.ಎ.ರಾಧಾಕೃಷ್ಣ. ಹಾಗೂ ಹೊಸನಗರ ತಾಲೂಕು ದೈಹಿಕ ಶಿಕ್ಷಣ ನಿಕಟ ಪೂರ್ವ ತಾಲೂಕ್ ಅಧಿಕಾರಿ ಎ.ಚಂದ್ರ ಬಾಬು ಹಾಗೂ 15ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರುಗಳು ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇