ತೀರ್ಥಹಳ್ಳಿ : ತಾಲೂಕಿನ ಹಾದಿಗಲ್ಲು ಬಳಿ ಅಪಘಾತವೊಂದು ಸಂಭವಿಸಿದ್ದು ಇದೆ ಮಾರ್ಗದಲ್ಲಿ ಬರುತ್ತಿದ್ದ ಗೃಹಸಚಿವ ಆರಗ ಜ್ಞಾನೇಂದ್ರರವರು ಮಾನವೀಯತೆ ಮೆರೆದ ಘಟನೆ ಭಾನುವಾರ ರಾತ್ರಿ ನೆಡೆದಿದೆ.
ಹಾದಿಗಲ್ಲಿನ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕರೆಂಟ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿತ್ತು. ಅದೇ ಮಾರ್ಗದಲ್ಲಿ ಬಂದ ಗೃಹಸಚಿವರು ಈ ಸನ್ನಿವೇಶ ನೋಡಿದ ಕೂಡಲೇ ಗಾಡಿಯಿಂದ ಇಳಿದು ಅಪಘಾತಕ್ಕೀಡಾದ ಕಾರಿನ ಮೇಲೆ ಕರೆಂಟ್ ವೈರ್ ಬಿದ್ದಿರುವುದನ್ನ ಗಮನಿಸಿ ಮೊದಲು ಕಾರಿನಲ್ಲಿದ್ದವರನ್ನು ಹೊರಗಡೆ ಕರೆ ತರುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು.
ನಂತರ ಕಾರಿನಲ್ಲಿದ್ದವರ ಆರೋಗ್ಯ ವಿಚಾರಿಸಿದ ಸಚಿವರು ಅವರ ಚಿಕಿತ್ಸೆಗೂ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವರದಿ : ಅಕ್ಷಯ್ ಕುಮಾರ್