ರಿಪ್ಪನ್ಪೇಟೆ : ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಅನಾರೋಗ್ಯ ಮುಕ್ತರನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಸರಕಾರ ಪೋಷಣ್ ಅಭಿಯಾನವನ್ನು ಜಾರಿಗೆ ತಂದಿಗೆ ಎಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಚಂದ್ರಕಲಾ ಹೇಳಿದರು.
ಸಮೀಪದ ಬೆಳ್ಳೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಬೆಳ್ಳೂರು ಮತ್ತು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶುಅಭಿವೃದ್ಧಿ ಯೋಜನೆಯ ವತಿಯಿಂದ ಗರ್ಭೀಣಿ ಮತ್ತು ಬಾಣಂತಿಯರಿಗಾಗಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಹೆಣ್ಣು ಗರ್ಭವತಿಯಾದ ದಿನದಿಂದ ಒಂದು ಸಾವಿರ ದಿನಗಳವರೆಗೆ ಪಾಲನೆ ಮಾಡುವ ಉದ್ದೇಶ ಯೋಜನೆಯದ್ದಾಗಿದೆ. ಇಂತಹ ಸಮಯದಲ್ಲಿ ಸರಕಾರದ ಯೋಜನೆಯನ್ನು ಪಡೆದುಕೊಂಡು ಮನೆಯಲ್ಲಿಯೇ ಸಿಗುವ ಹಣ್ಣು-ತರಕಾರಿ ಸೊಪ್ಪು-ಮೊಳಕೆೆಕಾಳುಗಳ ಸೇವನೆಯಿಂದ ತಮ್ಮ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳಬೇಕು ಇದರಿಂದ ಹುಟ್ಟಿದ ಮಗು ಆರೋಗ್ಯವಂತವಾಗಿದ್ದು, ಮುಂದೆ ಅದರಿಂದ ಜನನವಾಗುವ ಪೀಳಿಗೆಯು ಆರೋಗ್ಯ ಪೂರ್ಣವಾಗಿರುತ್ತದೆ ಎಂದರು. ಮಹಿಳೆಯರಿಗೆ ಫಲತಾಂಬೂಲಗಳ ಮೂಲಕ ಉಡಿತುಂಬಿದರು.
ನಂತರ ಬೆಳ್ಳೂರು ಗ್ರಾಪಂ ಅಧ್ಯಕ್ಷೆ ಮಾತನಾಡಿ ಅಪೌಷ್ಠಿಕ ಮುಕ್ತತೆಯನ್ನು ಮನಗೊಂಡಿರುವ ಸರಕಾರ ಪೋಷಣ್ ಅಭಿಯಾನ ಯೋಜನೆಯ ಮೂಲಕ ಮಹಿಳೆಯರಿಗೆ ವಿವಿಧ ಸೌವಲತ್ತುಗಳನ್ನು ನೀಡುತ್ತಿದೆ.ಈ ಯೋಜನೆಯಿಂದ ಬಡ ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲಕರವಾಗಿದೆ ಎಂದರು.
ಈ ಸಂಧರ್ಭದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿವಿಧ ರೀತಿಯ ಪೌಷ್ಠಿಕ ಭಕ್ಷ್ಯ ಭೋಜನವನ್ನು ಉಣಬಡಿಸಿ ಸಾಂಪ್ರದಾಯಿಕವಾಗಿ ಆರತಿ ಎತ್ತಿ ಶುಭಹಾರೈಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತಿಯ ಉಪಾಧ್ಯಕ್ಷ ರವೀಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಂಗಾರಪ್ಪ ಗ್ರಾಪಂ ಸದಸ್ಯರುಗಳಾದ ರಾಜೇಶ್, ಬೆಳ್ಳೂರು ತಿಮ್ಮಪ್ಪ, ಅರುಣ್ ಕುಮಾರ್ , ಷಣ್ಮುಖಪ್ಪ ,ಸತೀಶ ದಿವಾಕರ್ , ಹೇಮಾವತಿ, ಭವಾನಿ,ಕವಿತಾ, ಗಿರಿಜಮ್ಮ ಆರೋಗ್ಯ ಇಲಾಖೆಯ ರಾಘವೇಂದ್ರ, ಮಧುಸೂದನ್ ಗ್ರಾ ಪಂ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳ ಕಾರ್ಯಕರ್ತೆಯರು,ಸಹಾಯಕಿಯರು ಉಪಸ್ಥಿತರಿದ್ದರು.