Headlines

ಮೋದಿ ಜನ್ಮದಿನಾಚರಣೆಯ ಪ್ರಯಕ್ತ ಅಕ್ಟೋಬರ್ 1ರಂದು ಹೊಂಬುಜದಲ್ಲಿ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ

ರಿಪ್ಪನ್‌ಪೇಟೆ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಅಂಗವಾಗಿ ಹೊಂಬುಜ ದಲ್ಲಿ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.


ಮೋದಿ ಜನ್ಮ ದಿನಾಚರಣೆ ಅಂಗವಾಗಿ  ಬಿಜೆಪಿ ರೈತ ಮೋರ್ಚ ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದ್ದು ಈಗಾಗಲೇ ಹುಂಚ ಬಳಿಯಲ್ಲಿರುವ ಬಿಲ್ಲೇಶ್ವರ ಕುಮದ್ವತಿ ಉಗಮ ಸ್ಥಾನದ ಬಳಿಯ ಪುಷ್ಕರಣೆಯ ಅಮೃತ ಸರೋವರ ಸ್ವಚ್ಚತಾ ಅಂದೋಲನ ಮತ್ತು ರಕ್ತದಾನ ಶಿಬಿರ, ಅರೋಗ್ಯ ತಪಾಸಣೆ, ಎಸ್‌ಸಿ ಎಸ್ ಟಿ ಜನಾಂಗದ 50 ಅಯ್ದ ಬಡಮಕ್ಕಳಿಗೆ ಬ್ಯಾಗ್ ವಿತರಣೆ ಸೇರಿದಂತೆ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಿಸುವ ಕಾರ್ಯಕ್ರಮದೊಂದಿಗೆ ಅಕ್ಟೋಬರ್ 1 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಬುಜದಲ್ಲಿ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ಪುರುಷರ `ವಾಲಿಬಾಲ್’ಪಂದ್ಯಾವಳಿ ಹಾಗೂ ಮಾರುತಿಪುರ ಕಾನುಗೋಡುನಲ್ಲಿ ಅರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ರೈತ ಮೋರ್ಚ ಆಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ  ತಿಳಿಸಿದರು.

ಹೊಂಬುಜದ ಅಂಬೇಡ್ಕರ್  ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಕ್ಟೋಬರ್ 1 ರಂದು ಶನಿವಾರ ಬೆಳಗ್ಗೆ 11 ಕ್ಕೆ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್,ಎಂ.ಎಲ್.ಸಿ.ಎಸ್.ರುದ್ರೇಗೌಡರು, ಭಾರತಿಶೆಟ್ಟಿ,ಡಿ.ಎಸ್.ಅರುಣ್,ರೈತ ಮೋರ್ಚ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದಿನೇಶ್ ದೇವವೃಂದ,ರಾ.ರೈ.ಮೋ.ಉಪಾಧ್ಯಕ್ಷೆ ಮಂಜುಳ,.ಬಿ.ಕೆ.ಶ್ರೀನಾಥ,ಭಾಗವಹಿಸುವರು ಎಂದರು.

ಸಮಾರೋಪ ಸಮಾರಂಭ : 

ಜಿಲ್ಲಾ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಸಂಜೆ 7 ಗಂಟೆಗೆ ನಡೆಯಲಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅಧ್ಯಕ್ಷತೆ ವಹಿಸುವರು.

ರಾಜ್ಯ ರೈತ ಮೋರ್ಚ ಅಧ್ಯಕ್ಷ ಹಾಗೂ ರಾಜ್ಯಸಬಾ ಸದಸ್ಯ ಈರಣ್ಣ ಕಡಾಡಿ ಸಮಾರೋಪ ಭಾಷಣ ಮಾಡುವರು.ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ,ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ,ಸಂಸದ ಬಿ.ವೈ.ರಾಘವೇಂದ್ರ,ಮಾ.ಸ.ಕೆ.ಎಸ್.ಈಶ್ವರಪ್ಪ,ಶಾಸಕ ಹರತಾಳು ಹಾಲಪ್ಪ,ಕುಮಾರ ಬಂಗಾರಪ್ಪ,ಆಶೋಕ್‌ನಾಯ್ಕ್,ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ,ತಾ.ಬಿ.ಜೆ.ಪಿ.ಆ.ಗಣಪತಿ
ಬೆಳಗೋಡು, ರಾಘವೇಂದ್ರ, ಬಾಳೆಬೈಲು,ನಾಗರಾಜ್‌ಗೌಡ,ಬಿಜೆಪಿ ಮ.ಶ.ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಹುಂಚ ಗ್ರಾಪಂ ಅಧ್ಯಕ್ಷೆ ಪಲ್ಲವಿ ಇನ್ನಿತರ ಮುಖಂಡರು ಭಾಗವಹಿಸುವರು ಎಂದು ಸಾಲೆಕೊಪ್ಪ ರಾಮಚಂದ್ರ ಸುದ್ದಿಗೋಷ್ಟಿಯಲ್ಲಿ ವಿವರಿಸಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವುದಾಗಿ ತಿಳಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕ್ ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು,
ರಿಪ್ಪನ್‌ಪೇಟೆ-ಹುಂಚಾ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್, ನಾಗೇಂದ್ರ ಕಲ್ಲೂರು ,ಕುಕ್ಕೆ ಪ್ರಶಾಂತ, ಯದುವೀರ, ಗಿರೀಶ್ ಜಂಬಳ್ಳಿ,ತೀರ್ಥೇಶ್, ಮಹೇಶ ಕಟ್ಟೆ,ಅರುಣ್‌ಕುಮಾರ್ ನಿಟ್ಟೂರು,ನಜೀರ್‌ಸಾಬ್,ನಟೇಶ್,ಶ್ರೀಧರ,ಅಭಿಷೇಕ್ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *