Headlines

ರಿಪ್ಪನ್‌ಪೇಟೆಯ ಶಶಿಕಲಾ ಕೆ ಎನ್ ರವರಿಗೆ 2022-23 ರ ಸಾಲಿನ AIWAA ಅವಾರ್ಡ್ |

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರೊಫೇಷನಲ್ ಬ್ರೈಡಲ್ ಮೇಕಪ್ ಕೋಚಿಂಗ್ ನಡೆಸುವ ಮೂಲಕ ಹಲವಾರು ನಿರುದ್ಯೋಗಿ ಯುವತಿಯರಿಗೆ ಮೇಕಪ್ ತರಬೇತಿ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತಿರುವ ಶಶಿಕಲಾ ಕೆ ಎನ್ ಅವರಿಗೆ ಆಲ್ ಇಂಡಿಯಾ ವಿಮೆನ್ ಅಚಿವರ್ (AIWAA) ಅವಾರ್ಡ್ ದೊರೆತಿದೆ.


AIWAA -2022-23 ನೇ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನ KASSIA ಸಭಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಮೋಟಿವೇಷನಲ್ ಸ್ಪೀಕರ್  ಸೀಮಾ ವಿಕಾಸ್ ಗಾಡಿಯಾ ರವರು ಶಶಿಕಲಾ ಕೆ ಎನ್ ರವರಿಗೆ ವಿತರಿಸಿದರು.

ಶಶಿಕಲಾ ಕೆ ಎನ್ ರವರು ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿಯಾಗಿದ್ದು ಇವರ ಪತಿ ಸುರೇಶ್ ಕೂರಂಬಳ್ಳಿ ಶಿಕ್ಷಕ ವೃತ್ತಿಯಲ್ಲಿದ್ದಾರೆ.


 ಇಡೀ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಗುರುತಿಸಿ AIWAA ಸಂಸ್ಥೆ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಮೇಕಪ್ ತರಬೇತಿ ನೀಡುವ ಮೂಲಕ ನೂರಾರು ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಅವಕಾಶ ಮಾಡಿ ಕೊಟ್ಟ ಶಶಿಕಲಾ ಕೆ ಎನ್ ಅವರಿಗೆ ಈ ಸಾಲಿನ ಈ ಪ್ರಶಸ್ತಿ ದೊರೆತಿದೆ.


ಈ ಬಗ್ಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿದ ಶಶಿಕಲಾ ಕೆ ಎನ್ ರವರು ಎಐಡಬ್ಲ್ಯೂಎಎ ಅವರು ನನ್ನ ಶ್ರಮವನ್ನು ಗುರುತಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ನಾನು ಕಳೆದ ಹಲವು ವರ್ಷಗಳಿಂದ ಸಲ್ಲಿಸಿದ ಸೇವೆಗೆ ಸಂದ ಬಹುಮಾನ ಇದು, ಇದು ಕೇವಲ ನನಗೆ ಸಂದ ಬಹುಮಾನವಲ್ಲ, ಜಿಲ್ಲೆಯ ಎಲ್ಲ ಸ್ತ್ರೀಯರಿಗೆ ಸಂದ ಬಹುಮಾನ, ಮಹಿಳೆಯರು ತಮಗಿರುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಗೆ ಮುಂದಾಗಬೇಕೆಂಬುವುದೇ ನನ್ನ ಮನವಿ ಎಂದರು.

 ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬರು ಅಂತರಾಷ್ಟ್ರೀಯ ಸಂಸ್ಥೆ ಗುರುತಿಸುವಂತಹ ಸಾಧನೆಗೈದಿರುವುದಕ್ಕೆ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *