ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಎ ಎಸ್ ಐ ಗಣಪತಿ ಎಂ ರವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಳೆದ 30 ವರ್ಷಗಳಲ್ಲಿ ಭದ್ರಾವತಿ ,ಶಿವಮೊಗ್ಗ ಮತ್ತು ರಿಪ್ಪನ್ಪೇಟೆ ಠಾಣೆಯಲ್ಲಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಗಣಪತಿ ಎಂ ರವರನ್ನು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಶಿವಾನಂದ ಕೋಳಿ ಮತ್ತು ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಬೀಳ್ಕೊಟ್ಟರು.
ನಂತರ ಮಾತನಾಡಿದ ನಿವೃತ ಎ ಎಸ್ ಐ ಗಣಪತಿ ಎಂ 30 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ.ಇಲಾಖೆಯಲ್ಲಿ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಹಿರಿಯ ಅಧಿಕಾರಿಗಳು ಪ್ರೋತ್ಸಾಹ ಹಾಗೂ ಸಹದ್ಯೋಗಿಗಳು ತುಂಬಾ ಸಹಕಾರವನ್ನು ನೀಡಿದ್ದಾರೆ ಅವರಿಗೆ ಈ ಸಂಧರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಮಾತನಾಡಿದ ಪಿಎಸ್ ಐ ಶಿವಾನಂದ ಕೋಳಿ ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವದಲ್ಲಿ ಸಾರ್ಥಕತೆ ಕಂಡುಕೊಂಡು ನಿವೃತ್ತಿ ಹೊಂದುತ್ತಿರುವ ಇವರ ಜೀವನ ಸುಖಮಯವಾಗಿರಲಿ,ಇಲಾಖೆಯಲ್ಲಿ ಸೇವೆ ಸಲ್ಲಿಸಿದವರನ್ನು ಇಲಾಖೆಯು ಎಂದೂ ಮರೆಯುವುದಿಲ್ಲ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ನಿವೃತ್ತಿ ನಂತರವು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ನೀವು ಕಾರ್ಯನಿರ್ವಹಿಸಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎ ಎಸ್ ಐ ಹಾಲಪ್ಪ ,ಸಿಬ್ಬಂದಿಗಳಾದ ಉಮೇಶ್ ,ಶಿವುಕುಮಾರ್ ,ಪ್ರೇಮ್ ಕುಮಾರ್ ,ಮಧುಸೂದನ್ ಸೇರಿದಂತೆ ಇನ್ನಿತರರಿದ್ದರು.