ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೊಟ್ಯಾಳಪುರ ಗ್ರಾಮದ ಮಿನಿ ಅಂಗನವಾಡಿ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ಅಡ್ಡಗಾಲು ಹಾಕುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಸುಮಾರು ಐದಾರು ವರ್ಷಗಳ ಹಿಂದೆ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಮಜರೆ ಹೊಟ್ಯಾಳಪುರ ಮಿನಿ ಅಂಗನವಾಡಿಯಲ್ಲಿ ಮಗುವೊಂದಕ್ಕೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಸರ್ಕಾರದಿಂದ ಸುಸಜ್ಜಿತ ಮಿನಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿತ್ತು ಆದರೆ ಜಾಗ ಇಲ್ಲದೆ ಕಟ್ಟಡ ಕಟ್ಟುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದ ಗ್ರಾಮಸ್ಥರು ಮೂಗುಡ್ತಿ ವನ್ಯ ಜೀವಿ ವಲಯದ ಅರಣ್ಯ ಇಲಾಖೆಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಸಂಬಂಧಪಟ್ಟ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳದೇ ಇದ್ದ ಕಾರಣ ನಿನ್ನೆಯ ದಿನ ಏಕಾಏಕಿ ಗ್ರಾಮಸ್ಥರು ತಾತ್ಕಾಲಿಕ ಶೆಡ್ ನಿರ್ಮಿಸಿ ಇಂದು ಅಂಗನವಾಡಿಗೆ ಚಾಲನೆ ನೀಡಲಾಗಿತ್ತು.
ಇಂದು ಮೂಗೂಡ್ತಿ ವನ್ಯಜೀವಿ ವಿಭಾಗ ವಲಯ ಅರಣ್ಯಾಧಿಕಾರಿ ಆಫ಼್ರೀನ್ ನಾಜ್ ತಮ್ಮ ಸಿಬ್ಬಂದಿಗಳೊಂದಿಗೆ ತಾತ್ಕಾಲಿಕ ಅಂಗನವಾಡಿ ಶೆಡ್ ತೆರವುಗೊಳಿಸಲು ಮುಂದಾದಾಗ ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾಕರ ನೇತ್ರತ್ವದಲ್ಲಿ ಹೊಟ್ಯಾಳಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಪಂ ಅಧ್ಯಕ್ಷ ಹಾಗೂ ಅರಣ್ಯಾಧಿಕಾರಿ ನಡುವೆ ಮಾತಿನ ಚಕಮಕಿ:
ತಾತ್ಕಾಲಿಕವಾಗಿ ಹೊಟ್ಯಾಳಪುರದಲ್ಲಿ ನಿರ್ಮಿಸಿದ್ದ ಮಿನಿ ಅಂಗನವಾಡಿ ಶೆಡ್ ನ್ನು ಏಕಾಏಕಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ತೆರವುಗೆ ಮುಂದಾದಾಗ ಆಕ್ರೋಶಗೊಂಡ ಅಧ್ಯಕ್ಷರು ತೆರವುಗೊಳಿಸುವುದನ್ನು ನಿಲ್ಲಿಸುವಂತೆ ಹೇಳಿದಾಗ ಅರಣ್ಯಾಧಿಕಾರಿಗಳೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು : ಆಫ಼್ರೀನ್ ನಾಜ್
ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ವಲಯ ಅರಣ್ಯಾಧಿಕಾರಿ ಆಫ಼್ರೀನ್ ನಾಜ್ ರವರು ಮಿನಿ ಅಂಗನವಾಡಿ ಕಟ್ಟಡಕ್ಕೆ ಸ್ಥಳಾವಕಾಶ ನೀಡುವ ಬಗ್ಗೆ ಸಂಬಂಧಪಟ್ಟ ಸಿಡಿಪಿಓ ಮತ್ತು ಗ್ರಾಮ ಪಂಚಾಯ್ತಿ ಪಿಡಿಓರೊಂದಿಗೆ ಚರ್ಚಿಸಿ ಮೇಲಧಿಕಾರಿಗಳಿಗೆ ಪತ್ರ ಬರೆದು ಜಾಗ ನೀಡುವುದಾಗಿ ಭರವಸೆ ನೀಡಿ ಅಲ್ಲಿಯವರೆಗೆ ಆಂಗನವಾಡಿ ತೆರೆಯದಂತೆ ತಿಳಿಹೇಳಿದರು.
ಈ ಸಂಧರ್ಭದಲ್ಲಿ ಸ್ವಾಮಿ ನಾಯ್ಕ್,ಷಣ್ಮುಖ,ನಾಗಪ್ಪ,ಹೇಮಾವತಿ, ಕಮಲಾಕ್ಷಿ,ನಾಗಮ್ಮ,ಸುಜಾತ,ಪುಪ್ಪಾ, ದೇವಮ್ಮ,ಪಾರ್ವತಮ್ಮ,ಗಿರಿಜಮ್ಮ,ಲಕ್ ಷö್ಮಮ್ಮ ,ಸರೋಜ,ದುರ್ಗಮ್ಮ,ಉಮಾಕಂತ,ಮಂಜುನಾಥ, ತುಳಸಿ,ಕುಮಾರ,ನಾಗರಾಜ,ಉಮೆಶಪ್ಪ,ರಾ ಜಪ್ಪ ಇನ್ನಿತರ ಹಲವು ಗ್ರಾಮಸ್ಥರು ಅಂಗನವಾಡಿ ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಮೂಗುಡ್ತಿ ವನ್ಯಜೀವಿ ವಲಯ ಉಪವಲಯ ಅರಣ್ಯಾಧಿಕಾರಿಗಳಾದ ನದಾಫ್,ಸಂದೀಪ ಹಾಗೂ ಅರಣ್ಯ ರಕ್ಷಕ ಹೊಳೆಬಸಪ್ಪ ಇನ್ನಿತರ ಇಲಾಖೆ ಸಿಬ್ಬಂದಿವರ್ಗ ಭೇಟಿ ನೀಡಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇