ರಿಪ್ಪನ್ ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರಿಪ್ಪನ್ಪೇಟೆಯ ಎಂ. ಬಿ ಲಕ್ಷ್ಮಣಗೌಡ ಆಯ್ಕೆಯಾಗಿದ್ದಾರೆ.
15 ಜನ ನಿರ್ದೇಶಕರನ್ನು ಹೊಂದಿರುವ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಇತ್ತೀಚೆಗೆ ನಡೆದಿತ್ತು.ಈ ಚುನಾವಣೆಯಲ್ಲಿ ಎಂ.ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡದಿಂದ ಕಣಕ್ಕಿಳಿದ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಪಡೆದು ಜಯಭೇರಿ ಗಳಿಸಿ,ಅವಿರೋಧವಾಗಿ ಆಯ್ಕೆಯಾದ ಮೂವರು ಸೇರಿದಂತೆ 12 ಸ್ಥಾನವನ್ನು ಪಡೆದಿದ್ದರು.
ಇಂದು ಪಟ್ಟಣದ ಸಾಗರ ರಸ್ತೆಯ ವಿಶ್ವಮಾನವ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಆಯ್ಕೆಯಲ್ಲಿ ಎಂ ಬಿ ಲಕ್ಷ್ಮಣಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹೊಸನಗರ ತಾಲೂಕ್ ಒಕ್ಕಲಿಗ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದವರ ವಿವರ:
ಅಧ್ಯಕ್ಷರು : ಎಂ ಬಿ ಲಕ್ಷ್ಮಣಗೌಡ
ಕಾರ್ಯಾಧ್ಯಕ್ಷರು : ಹರೀಶ್ ಹೆಚ್ ವಿ
ಉಪಾಧ್ಯಕ್ಷರು : ತೇಜಮೂರ್ತಿ ಕೆ ಸಿ
ಕಾರ್ಯದರ್ಶಿ :ಮಂಜುನಾಥ್ ಇ ಡಿ
ಖಜಾಂಚಿ : ಕೃಷ್ಣಮೂರ್ತಿ ಟಿ ಎಂ