ರಿಪ್ಪನ್ಪೇಟೆ;-ಕೋಣಂದೂರು ಬೃಹನ್ಮಠದಲ್ಲಿ ಸುಮಾರು 3 ಕೋಟಿ ರೂ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶ್ರೀಶಿವಲಿಂಗೇಶ್ವರ ಸಮುದಾಯ ಭವನ ಲೋಕಾರ್ಪಣಿ ಮತ್ತು ಶ್ರೀಶೈಲ ಜಗದ್ಗುರುಗಳ ಪಟ್ಟಾಧಿಕಾರದ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಸನ್ನಿಧಿಯವರ ಐವತ್ತನೇ ವರ್ಷದ ಅಂಗವಾಗಿ ತುಲಾಭಾರ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೆಪ್ಟೆಂಬರ್ ೧೧ ಮತ್ತು ೧೨ ರಂದು ಅಯೋಜಿಸಲಾಗಿದೆ ಎಂದು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಹೇಳಿದರು.
ರಿಪ್ಪನ್ಪೇಟೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೆ.11 ರಂದು ಸಂಜೆ ಶ್ರೀಶಿವಲಿಂಗೇಶ್ವರ ಸಮುದಾಯ ಭವನದ ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರುಗಳ ದಿವ್ಯ ಸಾನಿಧ್ಯದಲ್ಲಿ ಮತ್ತು ಕೋಣಂದೂರು ಬೃಹನ್ಮಠದ ಶ್ರೀ .ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾದಿಗಲ್ಲು ವೇ.ಶಂಕರಯ್ಯ ಶಾಸ್ತ್ರಿ ಮತ್ತು ಪುರೋಹಿತ ವೃಂದದ ನೇತೃತ್ವದಲ್ಲಿ ಗಂಗಾಪೂಜೆ ಗಣಪತಿ ಪೂಜೆ ಪುಣ್ಯಾಹ ನಾಂದಿ ಪಂಚಕಲಶ ನವಗ್ರಹ ಪೂಜೆ ಅಷ್ಟವಿಕ್ವಾಲಕರು ಉಮಾಮಹೇಶ್ವರ ವಾಸ್ತು ರಕ್ಷಣ್ಣ ಹೋಮ ವಾಸ್ತು ಬಲಪೂಜೆ ರುದ್ರ ಹೋಮ ಪೂರ್ಣಹುತಿ ಪೂಜಾ ಕೈಂಕರ್ಯಗಳು ಜರುಗಲಿದೆ
ಸೆ.12 ರಂದು ಬೆಳಗ್ಗೆ 11 ಗಂಟೆ ಸಭಾಭವನ ಲೋಕಾರ್ಪಣೆ:-ಕರ್ನಾಟಕ ನೀರಾವಲ ನಿಗಮ ನಿಯಮಿತ ಇವರ ಅನುಧಾನದಡಿಯಲ್ಲಿ ನಿರ್ಮಿಸಲಾದ ಶಿಶಿವಲಿಂಗೇಶ್ವರ ಸಮುದಾಯ ಭವನ ಲೋಕಾರ್ಪಣಿ ಮತ್ತು ಧರ್ಮಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ಶ್ರೀಶೈಲಸೂರ್ಯ ಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯವಹಿಸಿ ಅಶೀರ್ವಚನ ನೀಡುವರು.
ಸಂಸದ ಬಿ.ವೈ.ರಾಘವೇಂದ್ರ ನೂತನ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡುವರು.ರಾಜ್ಯ ಗೃಹ ಸಚಿವ ಆರಗಜ್ಞಾನೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ನೇತೃತ್ವ ವಹಿಸುವರು ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಕವಲೆದುರ್ಗ ಮಹಾ ಸಂಸ್ಥಾನ ಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸುವರು.ಮುಖ್ಯ ಅತಿಥಿಗಳಾಗಿ ಶಾಸಕರಾದ ಆಯನೂರು ಮಂಜುನಾಥ,ಎಸ್.ರುದ್ರೇಗೌಡರು,ಎಸ್.ಎಲ್.ಭೋಜೇಗೌಡ,
ಭಾರತಿಶೆಟ್ಟಿ,ಡಿ.ಎಸ್.ಅರುಣ್.ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷ ಗುರುಮೂರ್ತಿ,ಭದ್ರ ಅಚ್ಚಕಟ್ಟು ಅಭಿವೃದ್ಧಿ ಮಂಡಲಿ ಅಧ್ಯಕ್ಷೆ ಪವಿತ್ರರಾಮಯ್ಯ,ಕೋಣಂದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೆಚ್.ಆರ್.ಶಾಂತಮ್ಮ ಇನ್ನಿತರರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಟಗಾರ ಸಂಗೀತಾ ಮತ್ತು ಸಂಗಡಿಗರ ಸಂಗೀತ ಕಾರ್ಯಕ್ರಮ ಮತ್ತು ಸುರಕ್ಷಾ ಲಲೀಶ್ ಕಗ್ಗ ಇವಲಂದ ಭರತನಾಟ್ಯ ಪ್ರದರ್ಶನ ಜರುಗಲಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇
ಕರ್ನಾಟಕ ರಾಜ್ಯ ಆಹಾರ ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನಕ್ಕೆ ಶ್ರದ್ಧಾಂಜಲಿ ಸಭೆ
ರಿಪ್ಪನ್ಪೇಟೆ: ರಾಜ್ಯದ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ವೀರಶೈವ ಸಮಾಜಕ್ಕೆ ತುಂಬಲಾದ ನಷ್ಟ ಉಂಟಾಗಿದೆ. ಸಮಾಜದ ದೀಮಂತ ವ್ಯಕ್ತಿಯನ್ನು ಕಳೆದುಕೊಂಡತಾಗಿದೆ ಎಂದು ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಅಗಲಿದ ಹಿರಿಯ ಚೇತನ ಸಚಿವ ಉಮೇಶ್ ಕತ್ತಿಯವರ ನಿಧನಕ್ಕೆ ರಿಪ್ಪನ್ಪೇಟೆಯಲ್ಲಿ ಶ್ರದ್ದಾಂಜಲಿ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಾಲಸ್ವಾಮಿಗೌಡ ಬೆಳಕೋಡು, ಹಾದಿಗಲ್ಲು ಶಂಕರಯ್ಯ ಶಾಸ್ತ್ರಿ, ದೇವೇಂದ್ರಪ್ಪಗೌಡ ನೆವಟೂರು, ಯೋಗೇಂದ್ರಗೌಡ, ಕುಕ್ಕಳಲೇ ಈಶ್ವರಪ್ಪ, ಕಗ್ಗಲಿ ಲಿಂಗಪ್ಪ, ಗಿರೀಶ್ ಕಗ್ಗಲಿ, ಜಂಬಳ್ಳಿ ಶಾಂತಕುಮಾರ್, ಜಂಬಳ್ಳಿ ಗಿರೀಶ್, ಡಿ.ಈ.ಮಧುಸೂದನ್, ಸೋಮಶೇಖರ್ ದೂನ, ಎಂ.ಡಿ.ಇಂದ್ರಮ್ಮ, ಧರ್ಮರಾಜ್, ಸಂತೋಷ ಶೆಟ್ಟಿಬೈಲು ಇನ್ನಿತರರು ಬಾಗವಹಿಸಿದ್ದರು.