ರಿಪ್ಪನ್‌ಪೇಟೆ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ವರೆಗೆ ‘ಹರ್ ಘರ್ ತಿರಂಗಾ’: ಹರತಾಳು ಹಾಲಪ್ಪ.

ರಿಪ್ಪನ್ ಪೇಟೆ : ಸ್ವಾತಂತ್ರ್ಯದ ಅಮೃತಮಹೋತ್ಸವದ ತಿರಂಗಾ’ ಕಾರ್ಯಕ್ರಮದಡಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಮನೆ, ಉದ್ಯಮ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಎಂ ಎಸ್ ಐ ಎಲ್ ಅಧ್ಯಕ್ಷ ಹಾಗೂ ಶಾಸಕ ಹರತಾಳು ಹಾಲಪ್ಪ  ಕರೆ ನೀಡಿದ್ದಾರೆ.


ಈ ಸಂಬಂಧ ರಿಪ್ಪನ್ ಪೇಟೆ ಪಟ್ಟಣದ  ಹಿಂದೂ ಮಹಾಸಭಾ  ಸಭಾಂಗಣದಲ್ಲಿ  ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಅದರಂತೆ ಹಗಲಿನಂತೆಯೇ ಹಾರಿಸುವ ರಾತ್ರಿಯಲ್ಲಿಯೂ ರಾಷ್ಟ್ರಧ್ವಜ ಅವಕಾಶವಿದೆ. ಅದೇ ರೀತಿ ಪ್ಲಾಸ್ಟಿಕ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳಿಂದ ತಯಾರಿಸಿದ ಧ್ವಜವನ್ನು ಬಳಸಬಹುದಾಗಿದೆ ಎಂದರು. ಧ್ವಜಗಳನ್ನು ಖರೀದಿಸಿ ಅವುಗಳನ್ನು ಉಚಿತವಾಗಿ ಸರಬರಾಜು ಮಾಡುವಂತೆ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳಿಗೆ ಈಗಾಗಲೇ ಸರಕಾರ ನಿರ್ದೇಶನ ನೀಡಲಾಗಿದೆ.


ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಧ್ವಜಗಳನ್ನು ಪೂರೈಸಲಾಗುತ್ತದೆ.  ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಧ್ವಜ ಹಾರಾಟದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.



ಹೊಸನಗರ ತಾಲೂಕು ತಹಸಿಲ್ದಾರ್ ವಿ ರಾಜೀವ್ ಮಾತನಾಡಿ ಆ.13ರ ಬೆಳಿಗ್ಗೆ 6 ಗಂಟೆಯಿಂದ ಆ. 15ರ ಸಂಜೆ 6ರವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಲಾಗಿದ್ದು, ಮನೆ ಅಥವಾ ಕಟ್ಟಡ ಮೇಲ್ಬಾಗದಲ್ಲಿ ಕಟ್ಟಬೇಕು. ಆ. 15ರ ನಂತರ ರಾಷ್ಟ್ರಧ್ವಜವನ್ನು ಇಳಿಸಿ ಸುರಕ್ಷಿತವಾಗಿಡಬೇಕು ಎಂದರು.ಎಲ್ಲಾ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಹೇಳಿದರು.


 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಮಾತನಾಡಿ  ಮಾತನಾಡಿ, ರಿಪ್ಪನ್ ಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಬೃಹತ್ ಸಂಖ್ಯೆಯ ಸಾರ್ವಜನಿಕರನ್ನು ಒಳಗೊಂಡಂತೆ ರಾಷ್ಟ್ರಧ್ವಜ ಪ್ರದರ್ಶಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.


 ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ . ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ. ಸರಕಾರಿ  ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎ. ಮಂಜುನಾಥ್ ಹಾಗೂ ಮುಖಂಡರಾದ ಎಂ ಬಿ ಮಂಜುನಾಥ್,ವೀರೇಶ್ ಆಲುವಳ್ಳಿ,ಆನಂದ್ ಮೆಣಸೆ,ಸುರೇಶ್ ಸಿಂಗ್, ಹಾಗೂ ವಿದ್ಯಾರ್ಥಿಗಳು ಇದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *