ರಿಪ್ಪನ್‌ಪೇಟೆ;-ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೇಸ್ ಪಕ್ಷದ ವಕ್ತಾರ ಗೋಪಾಲಕೃಷ್ಣ ಬೇಳೂರು ಹಾಲಿ ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ಬೆಂಬಲಿಗರೊAದಿಗೆ ಸುಳ್ಳು ಹಾಗೂ ನಿರಾಧಾರ ಅರೋಪ ಮಾಡುತ್ತಿದ್ದಾರೆಂದು ಕೆರೆಹಳ್ಳಿ-ಹುಂಚಾ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಅರೋಪಿಸಿದರು.
ರಿಪ್ಪನ್‌ಪೇಟೆ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಸುರಿದ ಭಾರಿಮಳೆಯಿಂದಾಗಿ ಕೆರೆಹಳ್ಳಿ ಹೋಬಳಿಯ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ-ಮಳವಳ್ಳಿ ಕನ್ನೇಹೊಂಡದ ನೀರು ನುಗ್ಗಿ ರಸ್ತೆ ಕೊಚ್ಚಿಹೋಗಿ ಸಾರ್ವಜನಿಕರು ಓಡಾಡದಂತಾಗಿರುವ ಬಗ್ಗೆ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ನಿರ್ಲಕ್ಷವೇ ಕಾರಣವೆಂದು ಅರೋಪಿಸಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
2004 ರಲ್ಲಿ ಕ್ಷೇತ್ರದ ಶಾಸಕರಾಗಿದ್ದ ಹಾಲಪ್ಪನವರ ಅವಧಿಯಲ್ಲಿ ಈ ರಸ್ತೆಗಳು ಅಭಿವೃದ್ದಿಪಡಿಸಲಾಗಿತು.ಆನಂತರದಲ್ಲಿ ಬೇಳೂರು ಹಾಗೂ ಕಾಗೋಡು ತಿಮ್ಮಪ್ಪ ನವರು ಶಾಸಕರಾಗಿ ಅಯ್ಕೆಯಾದರೂ ಕೂಡಾ ಈ ಭಾಗದಲ್ಲಿನ ರಸ್ತೆ ಸೇತುವೆಗಳು ಇವರಿಗೆ ಕಾಣಲಿಲ್ಲವೇ ಈಗ ಚುನಾವಣೆ ಬರುತ್ತಿರುವ ಸಂದರ್ಭವನ್ನು ಬಳಸಿಕೊಂಡು ಪುಕ್ಕಟೆ ಪ್ರಚಾರಕ್ಕಾಗಿ ಸಲ್ಲದ ಅರೋಪ ಮಾಡುತ್ತಿರುವ ಗೋಪಾಲಕೃಷ್ಣರಿಗೆ ಬಹಿರಂಗ ಸವಾಲು ಹಾಕುವುದರೊಂದಿಗೆ ಕ್ಷೇತ್ರದ ಶಾಸಕರು ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಅಭಿವೃದ್ದಿ ಕಾಮಗಾರಿಗಾಗಿ 9-75 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ ಅದರಲ್ಲಿ ಬರುವ ಮುಡುಬ ಮಳವಳ್ಳಿ ತಮ್ಮಡಿಕೊಪ್ಪ ಸಂಪರ್ಕ ರಸ್ತೆ ಅಭಿವೃದ್ದಿಗೆ 30 ಲಕ್ಷ ರೂ ಅರಸಾಳು ಕೊಳವಂಕ ಬಸವಾಪುರ ರಸ್ತೆ ದುರಸ್ಥಿಗೆ 40 ಲಕ್ಷ ರೂ.ಹಾರೋಹಿತ್ತಲು ಮಚಲಿಜಡ್ಡು ಅಡ್ಡೇರಿ ರಸ್ತೆಗೆ 30 ಲಕ್ಷ ರೂ.ಆಕಾಶಮಕ್ಕಿ ರಸ್ತೆಗೆ 25 ಲಕ್ಷ ರೂ ಅರಸಾಳು ಗ್ರಾಮದ ಎಸ್.ಸಿ ಕಾಲೋನಿ ಸಂಪರ್ಕದ ಕಾAಕ್ರೇಟ್ ರಸ್ತೆಗೆ 25 ಲಕ್ಷ ರೂ ಹಾರೋಹಿತ್ತಲು ಹೆಡ್ತಿರೆ ಮನೆ ರಸ್ತೆ ದುರಸ್ಥಿಗೆ 10 ಲಕ್ಷ ರೂ,ಮುಡುಬ ತಮ್ಮಡಿಕೊಪ್ಪ ರಸ್ತೆ ಅಭಿವೃದ್ದಿಗೆ 55 ಲಕ್ಷ ರೂ,ಬಸವಾಪರ-ಗುಂಡ್ರುಮೂಲೆ ರಸ್ತೆಗೆ 55 ಲಕ್ಷ ರೂ,ಹೀಗೆ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗಿದ್ದು ಮಾಜಿ ಶಾಸಕ ಗೋಪಾಲಕೃಷ್ಣರ ಅವಧಿಯಲ್ಲಿ ಬಿಡುಗಡೆಯಾದ ಅಭಿವೃದ್ದಿ ಅನುದಾನದ ಪಟ್ಟಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ನಂತರ ಮಾತನಾಡಿದ ಬಿಜೆಪಿ ಮುಖಂಡ ಆನಂದ್ ಮೆಣಸೆ ಬೇಳೂರು ಗೋಪಾಲಕೃಷ್ಣ ಚುನಾವಣೆ ಹತ್ತಿರ ಬರುತಿದ್ದಂತೆ ರಾಜಕೀಯ ಗಿಮಿಕ್ ಮಾಡಲು ಹೊರಟಿದ್ದಾರೆ.ಇತ್ತೀಚೆಗೆ ತಮ್ಮಡಿಕೊಪ್ಪದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಳೂರು ಬೆಂಬಲಿಗರು ಬಿಟ್ಟರೆ ಗ್ರಾಮಸ್ಥರು ಯಾರು ಇರಲಿಲ್ಲ ಕೇವಲ ರಾಜಕೀಯ ಅಸ್ತಿತ್ವಕ್ಕೆ ಪ್ರತಿಭಟನೆ ಮಾಡುತಿದ್ದಾರೆ ಎಂದು ಆರೋಪಿಸಿದರು. ಬೇಳೂರು ಮೊದಲು ಹಿರಿಯ ರಾಜಕಾರಣಿಗಳ ಬಗ್ಗೆ ನಾಲಗೆ ಹರಿಯಬಿಡುವುದನ್ನು ನಿಲ್ಲಿಸಬೇಕು ಹಾಗೇಯೆ ಅವರ ಅವಧಿಯಲ್ಲಿ ಬಿಡುಗಡೆಯಾದ ಅಭಿವೃದ್ದಿ ಅನುದಾನದ ಪಟ್ಟಿಯೊಂದಿಗೆ ರಿಪ್ಪನ್‌ಪೇಟೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರೊಂದಿಗೆ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಸುರೇಶ್‌ಸಿಂಗ್,ಎನ್.ಸತೀಶ್ ಮತ್ತು ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್ ಹಾಗೂ ಶಾಸಕರ ಅಪ್ತ ಸಹಾಯಕ ಕೀರ್ತಿಗೌಡ ಕುಕ್ಕಳಲೆ ಹಾಜರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇