ಒಂದು ಬೈಕ್ ಬೆನ್ನತ್ತಿದ್ದ ಪೊಲೀಸರಿಗೆ ದೊರೆತಿದ್ದು ಬರೋಬ್ಬರಿ 16 ಬೈಕ್,ಒಂದು ಕಾರು ಜೊತೆಗೆ ಶ್ರೀಗಂಧವೂ ಪತ್ತೆಯಾಗಿದೆ. ಬೈಕ್ ವೊಂದರ ಕಳ್ಳತನ ಪ್ರಕರಣದ ಬೆನ್ನತ್ತಿದ ಶಿರಾಳಕೊಪ್ಪ ಪೊಲೀಸರಿಗೆ ಕಳ್ಳರು ಕೊಟ್ಟರು ಬಿಗ್ ಶಾಕ್.
ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿದ್ದ ಕೆ.ಎ-17 ಇ.ಎ-4008 ನೋಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳುವು ಆಗಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಪ್ರಾರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಈ ಸಂಬಂಧ ಪಿಎಸ್ಐ ಶಿರಾಳಕೊಪ್ಪ ಮತ್ತು ಸಿಬ್ಬಂಧಿಗಳ ತಂಡವು ಪ್ರಕರಣದ ತನಿಖೆ ಕೈಗೊಂಡು ಇಂದು ಆರೋಪಿಗಳಾದ 1) ಸಂಡ ಗ್ರಾಮದ ಸೈಯ್ಯದ್ ಇಸ್ರಾರ್, 26 ವರ್ಷ, 2)ಪುನೇದನಹಳ್ಳಿಯ ರಾಕೇಶ್, 24 ವರ್ಷ ಹಾಗೂ 3)ಶಿರಾಳಕೊಪ್ಪ ಟೌನ್ ನಿನ ಗೋಪಾಲ, 28 ವರ್ಷ,ಇವರುಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದಾಗ ಬೃಹತ್ ಕಳ್ಳರ ಜಾಲ ಪತ್ತೆಯಾಗಿದೆ.
ಆರೋಪಿರಿಂದ ಕಳ್ಳತನ ಮಾಡಿದ ಅಂದಾಜು ಮೌಲ್ಯ 11,00,000/- ರೂ ಗಳ ಒಟ್ಟು 16 ಬೈಕ್ ಗಳು ಮತ್ತು ಇಟ್ಟಿಗೆ ಹಳ್ಳಿ ಅರಣ್ಯ ಉಪ ವಲಯ ವ್ಯಾಪ್ತಿಯಲ್ಲಿ ದಾಖಲಾದ 02 ಶ್ರೀ ಗಂಧದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 18,632 ರೂ ಗಳ 5 ಕೆಜಿ 480 ಗ್ರಾಂ ತೂಕದ ಶ್ರೀಗಂಧದ ತುಂಡು ಮತ್ತು ಚಕ್ಕೆಗಳು ಹಾಗೂ ಈ ಕೃತ್ಯಕ್ಕೆ ಬಳಸಿದ ಚವರ್ ಲೆಟ್ ಕಾರು ಅಮಾನತ್ತು ಪಡಿಸಿಕೊಳ್ಳಲಾಗಿದೆ.