ತೀರ್ಥಹಳ್ಳಿ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಮಾಳೂರು ಪೊಲೀಸರು 48 ಗಂಟೆಯಲ್ಲಿ ಪ್ರಕರಣದ ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನಲೆ :
ತಮಿಳುನಾಡಿನ ಮೂಲದ ಯುವಕ, ಚೆನ್ನಗಿರಿ ಹೊನ್ನಾಳಿ ಭಾಗದ ನೆಂಟರ ಸಂಪರ್ಕ ಪಡೆದು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ತೀರ್ಥಹಳ್ಳಿಯ ಕುಡುಮಲ್ಲಿಗೆಯಲ್ಲಿ ಗಾರೆ ಕೆಲಸ ಮಾಡುವವರೊಬ್ಬರ ಪರಿಚಯವಾಗಿ ಅವರ ಜೊತೆಗೆ 15 ದಿನದಿಂದ ಕೆಲಸ ಮಾಡುತ್ತಿದ್ದ.
ಆತ ತನಗೆ ಕೆಲಸ ಕೊಟ್ಟಿದ್ದವರ ಅಪ್ತಾಪ್ತ ವಯಸ್ಸಿನ ಮಗಳನ್ನ ಪುಸಲಾಯಿಸಿ, ತಮಿಳುನಾಡಿಗೆ ಕರೆದೊಯ್ದಿದ್ದ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಕೇವಲ 48 ಗಂಟೆಯ ಒಳಗಾಗಿ ಆರೋಪಿಯನ್ನ ಹಿಡಿದು, ಅಪ್ತಾಪ್ತೆಯನ್ನ ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಾರೆ.
ಮಾಳೂರು ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ಸೇರಿದಂತೆ ಸಿಬ್ಬಂದಿ ತಮಿಳುನಾಡಿನ ವೆಲ್ಲೂರಿಗೆ ಹೋಗಿ, ಅಲ್ಲಿ ಆರೋಪಿ ಇದ್ದ ವಿಳಾಸ ತಿಳಿದು ಕಾರ್ಯಾಚರಣೆ ನಡೆಸಿ ಆತನನ್ನ ಹಾಗೂ ಅಪ್ತಾಪ್ತೆಯನ್ನ ವಾಪಸ್ ಕರೆತಂದಿದ್ದಾರೆ. ಇನ್ನೂ ಪ್ರಕರಣ ಸಂಬಂಧ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
ವರದಿ : ಅಕ್ಷಯ್ ಕುಮಾರ್