ಭದ್ರಾ ಚಾನೆಲ್ ನಲ್ಲಿ ಸ್ನಾನ ಮಾಡಲು ಹೋದ ನಾಲ್ವರು ಮಕ್ಕಳಲ್ಲಿ ಇಬ್ಬರು ನೀರು ಪಾಲಾಗಿರುವ ಘಟನೆ ವರದಿಯಾಗಿದೆ.
ಸಮೀಪದ ಹೆಂಚಿನ ಸಿದ್ದಾಪುರ ಗ್ರಾಮದ ಭದ್ರಾ ಬಲದಂಡೆ ಕಾಲುವೆಯಲ್ಲಿ ದೊಡ್ಡಪ್ಪನ ಜೊತೆ ನಾಲ್ವರು ಮಕ್ಕಳು ಈಜಲು ಹೋಗಿದ್ದು ನಾಲ್ವರು ಕೈಕೈ ಹಿಡಿದು ನೀರಿಗೆ ಇಳಿದಿದ್ದಾರೆ. ಈ ವೇಳೆ ದೊಡ್ಡಪ್ಪರಾದ ಕುಬೇರಪ್ಪ ಒಬ್ವಳನ್ನ ಹಿಡಿದುಕೊಂಡ ಪರಿಣಾಮ ಒಂದು ಮಗುವನ್ನ ರಕ್ಷಣೆ ಮಾಡಿದ್ದಾರೆ. ಇನ್ನೂ ಮೂವರು ಮಕ್ಕಳು ನೀರಿನಲ್ಲಿ ತೇಲಿ ಹೋಗಿದ್ದಾರೆ.
ನೀರಿನಲ್ಲಿ ಮುಳುಗಿರುವ ಮೂವರ ಮಕ್ಕಳನ್ನು ಅಲ್ಲಿ ಕುರಿ ಕಾಯುತ್ತಿದ್ದ ಕುರಿಗಾಹಿಯೊಬ್ಬನು ಕಂಡು ನೀರಿಗೆ ಜಿಗಿದು ಒಂದು ಮಗುವನ್ನ ರಕ್ಷಣೆ ಮಾಡಿದ್ದಾರೆ. ಉಳಿದ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ಇದರಿಂದ ಸ್ವಾತಿ ಮತ್ತು ವರಲಕ್ಷ್ಮೀ ಎಂಬುವರು ಬಜಾವ್ ಆಗಿದ್ದಾರೆ.
ಅಗರದಹಳ್ಳಿ ಗ್ರಾಮದ ಲೋಹಿತ್ ಎಂಬುವರ ಮಕ್ಕಳಾದ ಚಂದನಾ(14) ಹಾಗೂ ಹರ್ಷ (10) ಎಂಬುವರು ಬುಧವಾರ ಬೆಳಿಗ್ಗೆ ತಮ್ಮ ದೊಡ್ಡಪ್ಪನ ಜೊತೆಗೆ ನಾಲೆಗೆ ಸ್ನಾನ ಮಾಡಲು ಹೋದ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.