ಶಿವಮೊಗ್ಗದ ಅಲ್ಕೊಳ ಸರ್ಕಲ್ ಹತ್ತಿರ ಬೈಕ್ ಅಪಘಾತವಾಗಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಎಕ್ಸ್ ಪಲ್ಸ್ KA14 E 9132 ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ತೆರಳುತ್ತಿದ್ದಾಗ ಆಲ್ಕೊಳ ಸರ್ಕಲ್ ಬಳಿ ಸ್ಕಿಡ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಬೈಕ್ ಚಾಲನೆ ಸಮಯದಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂಬುದು ಕಂಡು ಬಂದಿದೆ.
ಮೃತರನ್ನು ಕೋಟೆಗಂಗೂರಿನ ಗ್ರಾಮದ ಅಭಯ್ ಮತ್ತು ವರುಣ್ ಎಂದು ಗುರುತಿಸಲಾಗಿದ್ದು,ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
		 
                         
                         
                         
                         
                         
                         
                         
                         
                         
                        

