ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಮಧುಸೂದನ್ ಸೇರಿದಂತೆ ಜಿಲ್ಲೆಯ ಮೂವರು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಪಿಐ ಮಧುಸೂಧನ್ ಜಿ.ಕೆ ರವರು ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಜಿಲ್ಲೆಯ ಮೂರು ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಆಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಗುರುರಾಜ್ ಕೆ.ಟಿ, ಹೊಸನಗರ ಪೊಲೀಸ್ ಅಧಿಕಾರಿ ಮಧುಸೂಧನ್ ಮತ್ತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಚೈತನ್ಯ ಸಿ.ಜೆ. ವರ್ಗವಣೆಗೊಂಡಿರುವ ಪಿಐಗಳಾಗಿದ್ದಾರೆ
ಪಿಐ ಗುರುರಾಜ್ ಕೆ.ಟಿ ಕಡೂರು ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡರೆ, ಹೊಸನಗರ ಚೈತನ್ಯ ಸಿ.ಜೆ ಬೆಂಗಳೂರು ಅಶೋಕನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಪಿಐ ಗುರುರಾಜ್ ಕೆ.ಟಿ ಕಡೂರು ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡರೆ, ಹೊಸನಗರ ಚೈತನ್ಯ ಸಿ.ಜೆ ಬೆಂಗಳೂರು ಅಶೋಕನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ರಾಜ್ಯದಲ್ಲಿ 179 ಪಿಐಗಳು ವರ್ಗಾವಣೆಗೊಂಡಿದ್ದಾರೆ. ಇದರಲ್ಲಿ ಶಿವಮೊಗ್ಗ ಮೂವರು ಪಿಐಗಳು ವರ್ಗಾವಣೆಗೊಂಡಿದ್ದಾರೆ. ಅಚ್ಚರಿ ಎಂದರೆ ಈ ಮೂವರು ಅಧಿಕಾರಿಗಳ ಸ್ಥಾನಗಳನ್ನ ಹಾಗೆ ಉಳಿಸಿಕೊಳ್ಳಲಾಗಿದೆ. ಇನ್ನೂ ಮೂರು ಪೋಸ್ಟ್ ಗಳನ್ನ ಯಾವಾಗ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ದೊರತಿಲ್ಲ.