ಕರ್ನಾಟಕ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ ಪ್ರಬಲ ಆಕಾಂಕ್ಷಿಗಳು ಕೂಡ ತಮಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಜನ ಇದ್ದಾರೆ.
ಸಾಗರದಿಂದಲೂ ಹಲವಾರು ಆಕಾಂಕ್ಷಿಗಳು ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಳ್ಳಲು ಜೋರು ತಯಾರಿ ಕೂಡಾ ನಡೆಸುತ್ತಿದ್ದಾರೆ.
ಆದರೆ ಇವತ್ತು ಸಾಗರದಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾಗೋಡು ತಿಮ್ಮಪ್ಪನವರು ಸ್ಪರ್ಧಿಸಲಿದ್ದಾರೆ ಅವರಿಗೆ ಟಿಕೆಟ್ ಸಿಗಲಿದೆ ಹಾಗೂ ಅವರು ಇನ್ನೂ ಜನಸೇವೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ಎಂಬ ಹೊಸ ಮಾತನ್ನು ಹೇಳಿದ್ದಾರೆ.
ಜಿಕೆಬಿ ಗೆ ಚುನಾವಣೆಗೆ ಸಿದ್ದರಾಗಿ ಎಂದಿದ್ದ ಕಾಗೋಡು :
ಆದರೆ ಇತ್ತೀಚೆಗೆ ಬಟ್ಟೆಮಲ್ಲಪ್ಪ ಹಾಗೂ ರಿಪ್ಪನ್ ಪೇಟೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸ್ವತಃ ಕಾಗೋಡು ತಿಮ್ಮಪ್ಪ ರವರೇ ಬೇಳೂರು ಗೋಪಾಲಕೃಷ್ಣ ರವರಿಗೆ ಕ್ಷೇತ್ರಾದ್ಯಂತ ಓಡಾಡಿ ಚುನಾವಣೆಗೆ ಸಿದ್ದರಾಗಿ ಎಂದು ಮಾರ್ಮಿಕವಾಗಿ ಹೇಳಿದ್ದರು.
ಆದರೆ ಈಗ ಕೆಪಿಸಿಸಿ ವಕ್ತಾರೆ ರಾಜನಂದಿನಿ ರವರ ಈ ಹೇಳಿಕೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಳ್ಳಲು ನಡೆಸುತ್ತಿರುವ ರಾಜಕೀಯ ನಡೆ ಇರಬಹುದೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸಂಘಟನೆಗೋ?? ಪುತ್ರಿ ಗೋ……
ಒಟ್ಟಾರೆಯಾಗಿ ಸಾಗರ ವಿಧಾನಸಭಾ ಕ್ಷೇತ್ರದಾದ್ಯಂತ ಅಸಂಖ್ಯಾತ ಅಭಿಮಾನಿಗಳು,ಯುವ ಪಡೆ ಹಾಗೂ ನಿರಂತರ ಪಕ್ಷ ಸಂಘಟನೆ ಮಾಡುತ್ತಿರುವ ಗೋಪಾಲಕೃಷ್ಣ ಬೇಳೂರು ರವರಿಗೆ ಹೈಕಮಾಂಡ್ ಮಣೆ ಹಾಕುತ್ತೋ ಅಥವಾ ಕಾಗೋಡು ಪುತ್ರಿ ಹಾಗೂ ಕೆಪಿಸಿಸಿ ವಕ್ತಾರೆ ರಾಜನಂದಿನಿಗೆ ಮಣೆ ಹಾಕುತ್ತೋ ಕಾದು ನೋಡಬೇಕಾಗಿದೆ.