ಸಾಗರ ತಾಲೂಕಿನ ಯಳವರಸಿಯ ರೈಲ್ವೆ ಗೇಟ್ ಬಳಿ ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಹಿಂಬದಿ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ತ್ಯಾಗರ್ತಿ ನಿವಾಸಿ ಹಾಗೂ ಬಿಜೆಪಿ ತಾಲ್ಲೂಕು S.C ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪರಶುರಾಮ್ ಇಂದು ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಬೈಕ್ ಚಾಲಕ ಮಂಜುಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುವಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಂಜು ಹಾಗೂ ಪರಾಶುರಾಮ್ ಬೈಕ್ ನಲ್ಲಿ ಸಾಗರಕ್ಕೆ ಬರುತ್ತಿದ್ದಾಗ ರೈಲ್ವೆ ಗೇಟ್ ಬಳಿ ಜಿಂಕೆ ಅಡ್ಡ ಬಂದಿದೆ ಎನ್ನಲಾಗಿದೆ.ತಕ್ಷಣ ಬೈಕ್ ಸವಾರ ಮಂಜು ಬೈಕ್ ನ ಬ್ರೇಕ್ ಹಿಡಿದಿದ್ದಾರೆ.ಬೈಕಿನ ಹಿಂಬದಿ ಕುಳಿತಿದ್ದ ಪರಶುರಾಮ್ ಈ ಸಂಧರ್ಭದಲ್ಲಿ ಕೆಳಗೆ ಬಿದ್ದಿದ್ದಾರೆ.
ಇದರಿಂದ ಪರಸಪ್ಪ ತಲೆಗೆ ಬಲವಾದ ಪೆಟ್ಟಾಗಿ ತಲೆ ಹಾಗೂ ಕಿವಿ ಭಾಗದಲ್ಲಿ ವಿಪರೀತ ರಕ್ತ ಸ್ರಾವದಿಂದಾಗಿ ಪರಶುರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.