ತೀರ್ಥಹಳ್ಳಿ : ಪಟ್ಟಣ ಪಂಚಾಯತಿ ವ್ಯಾಪ್ತಿಯ ನಾಗರಿಕರ ಸಮಸ್ಯೆ ಕೇಳೋ ವ್ಯಕ್ತಿಗಳು ಯಾರು !?
ಹೀಗೊಂದು ಪ್ರೆಶ್ನೆ ಸಾರ್ವಜನಿಕರ ವಲಯದಿಂದ ಕೇಳುತ್ತಿದ್ದು ಇದಕ್ಕೆ ಚುನಾವಣೆಯಲ್ಲಿ ಗೆದ್ದವರಾಗಲಿ ಅಥವಾ ಅಲ್ಲಿನ ಅಧಿಕಾರಿಗಳಾಗಲಿ ಉತ್ತರ ನೀಡಬೇಕಿದೆ.
ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಏನು ?
ನೀರಿನ ಬಿಲ್ಲು:
ನೀರು ಬಿಲ್ಲು ಬರೀ ಆರಿಯಾರ್ಸ್ ಸೇರಿಸಿ ಬಿಲ್ಲು ಕೊಟ್ಟರೆ ಪರವಾಗಿಲ್ಲ. ಬಿಲ್ಲು ಕೊಡದೇ ಎರಡು ಮೂರು ತಿಂಗಳಿಗೊಮ್ಮೆ ಬಿಲ್ಲು ಕೊಟ್ಟು, ಸ್ಲಾಬ್ ರೇಟು ಜಾಸ್ತಿಯಾಗಿ ನಮ್ಮದಲ್ಲದ ತಪ್ಪಿಗೆ ನಾವು ದಂಡ ಕೊಡೋದು ಯಾವ ನ್ಯಾಯ? ತಿಂಗಳು ತಿಂಗಳು ಬಿಲ್ಲು ಕಟ್ಟುವ ಕಿರಿಕಿರಿ ಬೇಡ ಎಂದು ಒಮ್ಮೆಲೇ ನಾವು 1000/- ರೂ ಕಟ್ಟಿದರೆ ನಮ್ಮ ಖಾತೆಗೆ ಜಮಾ ಆಗುವುದೇ ಕಷ್ಟ ಆಗುತ್ತದೆ. ಅಲ್ಲದೇ ತುಂಬಾ ತಡವಾಗುವುದು ಬೇರೆ, ಅಷ್ಟೇ ಅಲ್ಲದೇ ಕಟ್ಟಿದ ಮೇಲು ಬಿಲ್ಲಿನಲ್ಲಿ ಬಾಕಿ ಎಂದೇ ಬರುತ್ತದೆ ಹೀಗೆ ಹಲವಾರು ಕಾರಣ
ಕಂದಾಯ ಕಟ್ಟಿಸಿಕೊಳ್ಳೋದರಲ್ಲು ಸಮಸ್ಯೆ !?
ಕಂದಾಯ ಕಟ್ಟುವ ಹಣ 3% ಜಾಸ್ತಿ ಮಾಡಲು ಜಿಲ್ಲಾಧಿಕಾರಿಗಳ ಆದೇಶ ಇದೆ ಎಂಬ ಕಾರಣಕ್ಕೆ ಯಾರಿಗೂ ಕಂದಾಯವನ್ನು ಕಟ್ಟಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದ್ದಕ್ಕೆ 2 -3 ದಿನದೊಳಗೆ ಆಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಇಂದಿಗೆ 10 ದಿನದ ಮೇಲೆ ಆದರೂ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ . ಏಪ್ರಿಲ್ ತಿಂಗಳಿನಲ್ಲಿ ಕಟ್ಟಿದರೆ 5% ಪರ್ಸೆಂಟ್ ರಿಯಾಯತಿ ಇತ್ತು. ತಾರೀಖು 17ಕಳೆದರೂ ಕಂದಾಯ ಕಟ್ಟಿಸಿ ಕೊಳ್ಳದೇ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮಸ್ಯೆ ಏನೇ ಇದ್ದರೂ ನಮಗೆ ಸಮಯ ಸಿಗುವುದು 13 ದಿನ ಮಾತ್ರ,ಈ ಸಮಸ್ಯೆ ಗಳನ್ನು ಹೇಳಿಕೊಳ್ಳಲು ಕಚೇರಿಗೆ ಭೇಟಿ ಕೊಟ್ಟರೆ ಅಲ್ಲೂ ಸಂಬಂಧ ಪಟ್ಟ ನೌಕರ ಅಥವಾ ಮುಖ್ಯಾಧಿಕಾರಿ ಸಿಗುವುದೇ ಕಷ್ಟ. ಬೇರೆಯವರನ್ನು ಕೇಳಿದರೆ ಮಾಹಿತಿ ಸಿಗುವುದಿಲ್ಲ. ಆದ್ದರಿಂದ ಕಂದಾಯ ರಿಯಾಯತಿ ದರದಲ್ಲಿ ಕಟ್ಟಲು ಮೇ 15 ರತನಕ ಸಮಯ ಕೊಡುವುದು ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯ ತಿಳಿಸಿದ್ದಾರೆ .
ಇನ್ನು ನೀರಿನ ಶುಲ್ಕ ಹಾಗೂ ಕಂದಾಯ ಪಾವತಿ ಮಾಡಲು ಆನ್ಲೈನ್ ವ್ಯವಸ್ಥೆ ಸಾದ್ಯ ಆದರೆ ತುಂಬಾ ಅನುಕೂಲ ಎಂದು ಈ ಮೂಲಕ ಸಾರ್ವಜನಿಕರು ತಿಳಿಸಿದ್ದಾರೆ.
ವರದಿ: ಅಕ್ಷಯ್ ಕುಮಾರ್
ವರದಿ: ಅಕ್ಷಯ್ ಕುಮಾರ್