ಹಿಜಾಬ್ ಕುರಿತು ಬಹುನಿರೀಕ್ಷಿತ ತೀರ್ಪು ಪ್ರಕಟ : ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರಿಗೆ ಭಾರಿ ನಿರಾಸೆ !!!!!!!

ಹಿಜಾಬ್​ ಇಸ್ಲಾಂನ ಅತ್ಯಗತ್ಯವಾದ ಭಾಗವಲ್ಲ ಎಂದು ಹೈಕೋರ್ಟ್​ ಹೇಳಿದ್ದು, ಈ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ಕಾನೂನು ಬದ್ಧವಾಗಿಯೇ ಇದೆ ಎಂದಿದೆ.


ಅಲ್ಲದೆ ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವಂತಿಲ್ಲ .ಹಿಜಬ್​​ ಗೆ ಅವಕಾಶ ಕೋರಿದ್ದ ಎಲ್ಲಾ ರಿಟ್ ಅರ್ಜಿಗಳನ್ನ ವಜಾ ಮಾಡಿದೆ.

 ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಉಡುಪಿಯ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು  ಕಾಯ್ದಿರಿಸಿದ್ದ ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಝಿ ಅವರನ್ನೊಳಗೊಂಡ ಹೈಕೋರ್ಟ್‌ನ ಪೂರ್ಣ ಪೀಠ ಈ ತೀರ್ಪನ್ನು ಪ್ರಕಟಿಸಿದೆ.

ತೀರ್ಪಿನಲ್ಲಿ ಏನಿದೆ?

ಕೆಲವು ಪ್ರಶ್ನೆಗಳನ್ನು ನಾವು ರಚಿಸಿದ್ದೇವೆ ಮತ್ತು ಉತ್ತರವನ್ನು ಕೂಡ ನಾವು ಹೇಳಿದ್ದೇವೆ ಎಂದು ಸಿಜೆ ಹೇಳಿದ್ದಾರೆ.

ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ- ಹೈಕೋರ್ಟ್

ಸರಕಾರದ ವಸ್ತ್ರಸಂಹಿತೆ ಪ್ರಶ್ನೆ ಮಾಡುವಂತಿಲ್ಲ. ಸರಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *