Headlines

ಶಿವಮೊಗ್ಗದಲ್ಲಿ ವಾಕಿಂಗ್ ಹೋಗಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ , ಕಲ್ಲು ತೂರಾಟ

ವಾಕಿಂಗ್ ಗೆ ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವನ ಮೇಲೆ 5-6 ಜನರ ಗುಂಪೊಂದು ದಿಡೀರನೇ ಕಲ್ಲುತೂರಿದ ಘಟನೆ ಇಂದು ಸಂಜೆ ನಡೆದಿದೆ. ಈ ಘಟನೆಗೆ ಕಾರಣಗಳೇನು ಎಂಬುದು ಇನ್ನೂ ತಿಳಿದುಬರಬೇಕಿದೆ.

ಗೋಪಾಳದ ಪದ್ಮಚಲನಚಿತ್ರ ಮಂದಿರದ ಸರ್ಕಾರಿ ಶಾಲೆಯ ಬಳಿ ವೆಂಕಟೇಶ್ ಎಂಬುವರು ತಮ್ಮ ಮನೆಯ ನಾಯಿಯನ್ನ ಹಿಡಿದುಕೊಂಡು ವಾಕಿಂಗ್ ಗೆ ಹೋಗುವಾಗ ದಿಡೀರನೇ ಐದಾರು ಜನರ ಗುಂಪೊಂದು ಕಲ್ಲು ತೂರಿದ್ದು ವೆಂಕಟೇಶ್ ರವರ ತಲೆಗೆ ಪೆಟ್ಟುಬಿದ್ದಿದೆ.

ಅವರನ್ನ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹಿಂದೂ ಮುಖಂಡರಾದ ದೀನ್ ದಯಾಳು, ಬಿಜೆಪಿಯ ದತ್ತಾತ್ರಿ ಪಾಲಿಕೆಯ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಹಾಗೂ ಇತರರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ನಡೆದು 12 ನೇ ದಿನಕ್ಕೆ ಈ ಘಟನೆ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಬಿಜೆಪಿ ಮುಖಂಡ  ಧೀನ್ ದಯಾಳ್  ಇದನ್ನು ಕೋಮು ಗಲಭೆ ಎಂದೇ ಬಣ್ಣಿಸಿದ್ದಾರೆ.
ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಲಕ್ಷ್ಮೀ ಪ್ರಸಾದ್ ಈ ಘಟನೆಯು ಕೋಮುಗಲಭೆ ಆಯಾಮದಿಂದ ನಡೆದಿರುವ ಬಗ್ಗೆ ಇನ್ನೂ ತಿಳಿದು ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *