ರಿಪ್ಪನ್ ಪೇಟೆ :ಹೋಬಳಿ ಮಟ್ಟದ ಕಾಲೇಜಿನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಾಲೇಜುಗಳನ್ನು ಹಿಂದೆ ಸರಿಸಿ ತಮ್ಮ ಅವಿರತ ಪರಿಶ್ರಮದಿಂದ ಇಂದು ರಾಷ್ಟ್ರ ಮಟ್ಟದ ಲೀಡರ್ ಬೊರ್ಡ ನಲ್ಲಿ 10 ರಲ್ಲಿ 5 ಸ್ಥಾನಗಳನ್ನು ಅಂದರೆ ಶೇಕಡಾ ಐವತ್ತರಷ್ಟು ಸ್ಥಾನವನ್ನು ಬಾಚಿಕೊಂಡಿದ್ದಾರೆ.
ಇಂದಿನ ಉನ್ನತ ತಂತ್ರ ಜ್ಞಾನ ಯುಗದಲ್ಲಿ ಕಂಪನಿಗಳಿಗೆ ಬೇಕಾದಂತಹ ಟೆಕ್ನಾಲಜಿ ಗಳನ್ನು ಕಲಿಸುವ ವಿದ್ಯಾರ್ಥಿಗಳನ್ನು ಕೈಗಾರಿಕ ತರಬೇತಿ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ನಡೆಯುತ್ತಿರುವ ಡಿಜಿಟಲ್ ಸರ್ಟಿಫಿಕೇಟ್ ಕೋರ್ಸ್ ಗಳ
ಪೆಬ್ರವರಿ 2022 ತಿಂಗಳ ಇನ್ಪೋಸಿಸ್ ಸ್ಪ್ರಿಂಗ್ ಬೋರ್ಡ್ ನಲ್ಲಿ ಅತಿ ಹೆಚ್ಚು ಅಂಕಗಳಿಸಿ ಅಖಿಲ ಭಾರತ ಸ್ಪರ್ಧೆಯಲ್ಲಿ ಕರ್ನಾಟಕದ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆಯನ್ನು ಮೆರೆದಿದ್ದಾರೆ.
ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಬೋರ್ಡ್ ಪ್ರತಿ ತಿಂಗಳು ಪ್ರಕಟಿಸುವ ಲಿಡರ್ ಬೋರ್ಡ್ ನಲ್ಲಿ ಕಾಲೇಜಿನ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
1. ದ್ವೀತಿಯ ಬಿಬಿಎ ವಿದ್ಯಾರ್ಥಿನಿ ಚೈತ್ರ ಕೆ.ಸಿ.ದೇಶದಲ್ಲೇ ಮೂರನೇ ಸ್ಥಾನ ಪಡೆದಿದ್ದಾರೆ.
2.ದ್ವೀತಿಯ ಬಿ.ಕಾಂ ವಿದ್ಯಾರ್ಥಿ ನವೀನ್. ಎನ್ ದೇಶದಲ್ಲೇ ನಾಲ್ಕನೆ ಸ್ಥಾನ ಪಡೆದಿದ್ದಾರೆ.
3.ಅಂತಿಮ ಬಿ.ಕಾಂ ವಿದ್ಯಾರ್ಥಿ ಮಾನಸ.ಕೆ.ಎಂ ದೇಶದಲ್ಲೇ ಏಳನೇ ಸ್ಥಾನ ಪಡೆದಿದ್ದಾರೆ.
4.ದ್ವೀತಿಯ ಬಿಬಿಎ ವಿದ್ಯಾರ್ಥಿ ತೀರ್ಥೇಶ್.ಟಿ ದೇಶದಲ್ಲೇ ಎಂಟನೇ ಸ್ಥಾನ ಪಡೆದಿದ್ದಾರೆ.
5.ದ್ವೀತಿಯ ಬಿಬಿಎ ವಿದ್ಯಾರ್ಥಿನಿ ನಿಸರ್ಗ ದೇಶದಲ್ಲೇ ಹತ್ತನೆ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರ್ ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.