ಸಾಗರ ತಾಲೂಕಿನ ತುಮರಿ ಬಳಿಯ ವಕ್ಕೋಡಿ ತಿರುವಿನಲ್ಲಿ ಕಂದಕಕ್ಕೆ ಟೆಂಪೋ ಟ್ರ್ಯಾಕ್ಸ್ ಉರುಳಿ ಬಿದ್ದು ಓರ್ವ ಮಹಿಳೆ ಮೃತ ಪಟ್ಟಿರುವ ಘಟನೆ ನಡೆದಿದೆ.
ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ ಕುಷ್ಟಗಿಯ ಭಕ್ತಾದಿಗಳು ಇದ್ದ ಜೀಪ್ ಕಂದಕಕ್ಕೆ ಬಿದ್ದು ಗೌರಮ್ಮ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನುಳಿದವರಿಗೆ ತುಮರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗರ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇವತ್ತು ದ್ವೀಪದಲ್ಲಿ ಎರಡು ಅಫಘಾತವಾದ ಕಾರಣ 108 ಮೊದಲ ಅಫಘಾತಕ್ಕೆ ಸೇವೆ ನೀಡಲು ಕುಂದಾಪುರ ಹೋದ ಕಾರಣ ಲಭ್ಯವಾಗಲಿಲ್ಲ. ಜಂಟಿ 108 ಸೇವೆ ಬೇಕು ಎನ್ನುವುದು ಈ ಕಾರಣಕ್ಕೆ… ಲಾಂಚ್ ಈ ಕಡೆ ರಾತ್ರಿ ಇರಬೇಕು ಎಂದು ದ್ವೀಪ ಜನ ಹೇಳುವುದು ಈ ಕಾರಣಕ್ಕಾಗಿಯೇ ಎಂದು ಇಲ್ಲಿನ ಜನ ಹೇಳುತ್ತಾರೆ.
ವಾಹನದಲ್ಲಿದ್ದ ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಅಪಘಾತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇
ಕೃಪೆ: ಸತ್ಯನಾರಾಯಣ ಜಿ ಟಿ ತಮರಿ
 
                         
                         
                         
                         
                         
                         
                         
                         
                         
                        