ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿ ತಿರುವಿನಲ್ಲಿ ಬೈಕ್ ಅಪಘಾತವಾಗಿ  ಆಯನೂರು ಮೂಲದ ಯುವಕನೋರ್ವ ಮೃತಪಟ್ಟಿರುವ ಘಟನೆ ಇಂದು ಸಂಜೆ  ನಡೆದಿದೆ.
ಆಯನೂರು ಸಮೀಪದ ಇಟ್ಟಿಗೆಹಳ್ಳಿ ನಿವಾಸಿ ಸುದರ್ಶನ್(25) ಎಂಬ ಯುವಕ ಮೃತಪಟ್ಟ ದುರ್ದೈವಿ.
ರಿಪ್ಪನ್ ಪೇಟೆ ಕಡೆಯಿಂದ ಆಯನೂರು ಕಡೆಗೆ ಟಿವಿಎಸ್ ಅಪಾಚೆ ಬೈಕ್ (KA 14 EP 9884) ನಲ್ಲಿ ತೆರಳುತ್ತಿರುವಾಗ ಬೆನವಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ ಈ ಸಂಧರ್ಭದಲ್ಲಿ ಹಿಂಬದಿ ಕುಳಿತಿದ್ದ ಆಯನೂರು ಸಮೀಪದ ಇಟ್ಟಿಗೆಹಳ್ಳಿ ನಿವಾಸಿ ಸುದರ್ಶನ್ ಕೆಳಗೆ ಬಿದ್ದು ತಲೆಗೆ ತೀವ್ರತರವಾದ ಪೆಟ್ಟಾಗಿದ್ದು ಕೂಡಲೇ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು ನಂತರ ಹೆಚ್ವಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ಕಳುಹಿಸಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಯುವಕ ಮೃತಪಟ್ಟಿದ್ದಾನೆ.ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮೆಗ್ಗನ್ ಶವಗಾರದಲ್ಲಿ ಇರಿಸಲಾಗಿದೆ.
ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಪ್ರಕರಣ ದಾಖಲಾಗಿದೆ.
		 
                         
                         
                         
                         
                         
                         
                         
                         
                         
                        

