ಪೊಲೀಸರು ಮಹಜರ್ ಗೆ ಹೋದಾಗ ವ್ಯಕ್ತಿಯೋರ್ವ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಲಾಠಿ ರುಚಿ ತೋರಿಸಿದ ಘಟನೆ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.
ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪ ಹತ್ತಿರ ಬಾಣಿಗ ಗ್ರಾಮದಲ್ಲಿ ಘಟನೆಯೊಂದಕ್ಕೆ ಪೊಲೀಸರು ಮಹಜರ್ ಗೆ ಹೋದಾಗ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನಿಗೆ ಮನಸೋಇಚ್ಚೇ ಥಳಿಸಲಾಗಿದೆ ಎನ್ನಲಾಗಿದೆ.
ಹೊಸನಗರ ಪಿಎಸ್ ಐ ರಾಜೇಂದ್ರ ಎ ನಾಯ್ಕ್ ಹಾಗೂ ಜೀಪ್ ಚಾಲಕ ಅವಿನಾಶ್ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಈ ವಿಡಿಯೋ ಗ್ರಾಸವಾಗಿದೆ.
ಕಳೆದ ಎರಡು ವಾರಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
ಗೃಹ ಸಚಿವರ ಪ್ರತಿಕ್ರಿಯೆ :
ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಹೊಸನಗರ ಪಿಎಸ್ಐ ಮಾರಣಾಂತಿಕ ಹಲ್ಲೆ ನಡೆಸರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಜರುಗಿಸಲಾಗುವುದು ಎಂದರು.
ಅವರು ಶಿಕಾರಿಪುರದ ಐಬಿಯಲ್ಲಿ ಮಾಧ್ಯಮದವರು ತೋರಿಸಿದ ವಿಡಿಯೋ ನೋಡಿ ಎರಡು ನಿಮಿಷ ಮಂತ್ರಮುಗ್ಧರಾಗಿ ನಂತರ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹರ್ಷ ಕೊಲೆ ಆರೋಪಿಗಳಿಗೆ ವಿಶೇಷ ಕಾಯ್ದೆ ವಿಧಿಸುವುದಿಲ್ಲ :
ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆದು ಆರೋಪಿಗಳನ್ನ ಬಂಧಿಸಲಾಗಿದೆ. ವಿಶೇಷ ಕಾಯ್ದೆ ವಿಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಘಟನೆಗೆ ಸಂಬಂಧಿಸಿದಂತೆ ಎಸ್ಡಿಪಿಐ, ಫಿಎಫ್ಐ ಮತ್ತಿತರ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವ ಬಗ್ಗೆ ಕೇಂದ್ರ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದಿಂದ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇