ಜಿಲ್ಲೆಯ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ರದ್ದಾಗಿದೆ.
ಶಿವಮೊಗ್ಗ ಸಮೀಪದ ಹೊಳಲೂರು ಗ್ರಾಪಂನಲ್ಲಿ ಪಂಚಾಯತ್ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ಆಗಮಿಸಬೇಕಿತ್ತು.
ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಕೂಡ ಸಿದ್ಧತೆ ಪರಿಶೀಲನೆ ನಡೆಸಿದ್ದರು. ಆದರೆ ಪ್ರಧಾನಿ ಅವರು ಅಂದು ಭೇಟಿ ಕೊಡುವ ಕಾರ್ಯಕ್ರಮ ರದ್ದಾಗಿದೆ. ಪಂಚಾಯತ್ ರಾಜ್ ದಿನವಾದ ಹಿನ್ನೆಲೆಯಲ್ಲಿ ಆ ದಿನ ಪ್ರಧಾನಿಯವರು ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದಾರೆ.
ಪ್ರಧಾನಿಯವರ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
		 
                         
                         
                         
                         
                         
                         
                         
                         
                         
                        