ಅದ್ದೂರಿಯಾಗಿ ನಡೆಯಿತು ರಿಪ್ಪನ್ ಪೇಟೆಯ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಠಾವರ್ಧಂತಿ ಮಹೋತ್ಸವ

ರಿಪ್ಪನ್‍ಪೇಟೆ:-ಇಲ್ಲಿನ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ  19ನೇ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಸುಸಂಪನ್ನ ಗೊಂಡಿತು.

 ಹರತಾಳು ರಾಘವೇಂದ್ರಸ್ವಾಮಿ ಮಠದ ಪ್ರಧಾನ ಅರ್ಚಕರು ಮತ್ತು ದೇವಸ್ಥಾನದ ಅರ್ಚಕ ವೃಂದದವರಿಂದ ಇಂದು ಬೆಳಗ್ಗೆ ನಾಗದೇವರ ಸನ್ನಿಧಿಯಲ್ಲಿ ಕಲಾ ಹೋಮ ನವಕಪ್ರದಾನ ಕಳಸ ಕಲಶಾಭಿಷೇಕ ಆದಿವಾಸ ಹೋಮ ಪವಮಾನ ಅಭಿಷೇಕ ಆಶ್ಲೇಷ ಬಲಿ ಹಾಗೂ ರಕ್ತೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾ ಹೋಮ ಕಲಶಾಭಿಷೇಕ ಮಹಾಪೂಜೆ ತೀರ್ಥಪ್ರಸಾದ ವಿನಿಯೋಗ ಜರುಗಿತು.


ಈ ಸಂದರ್ಭದಲ್ಲಿ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ಪ್ರತಿಷ್ಟಾಪನೆಗೂ ಮೊದಲು ಇಲ್ಲಿ ಬರಿ ಹುತ್ತವೊಂದು ಇದ್ದು ಅಗಾಗ ಸುತ್ತಮುತ್ತಲಿನ ಜನರಿಗೆ ಕಾಣಿಸುತ್ತಿದ್ದ ನಾಗದರ್ಶನದಿಂದ ಭಯಭೀತರಾಗಿ ಹಲವು ಜೋತಿಷಿಗಳ ಬಳಿ ಅರೋಢ ಪ್ರೆಶ್ನೆಗಳನ್ನು ಕೇಳಿದಾಗ ಇದೊಂದು ಸುಕ್ಷೇತ್ರವಾಗಿ ರೂಪುಗೊಳ್ಳುವುದು ಎಂಬ ಭವಿಷ್ಯವಾಣಿ ಇಂದು ಅಪಾರ ಭಕ್ತರ ಕಷ್ಟಕಾರ್ಪಣ್ಯಗಳನ್ನು ಕರಗಿಸಿ ಭಕ್ತರ ಉದ್ದಾರಕರಾಗಿ ರಿಪ್ಪನ್‍ಪೇಟೆಯ ಸಾಗರ ರಸ್ತೆಯ ತಿಲಕ್ ನಗರದಲ್ಲಿ ಉದ್ಬವ ಮೂರ್ತಿಯಾಗಿ ಹುತ್ತದಲ್ಲಿ ನಲೆ ನಿಂತಿದ್ದಾಳೆಂದು ಹಿರಿಯರಾದ ಜಗನ್ನಾಥಶೆಟ್ಟರು.ಆರ್.ಟಿ.ಗೋಪಾಲ. ಬಿ.ಕೆ.ಹರೀಶ್.ಇನ್ನಿತರರು ಮಾಧ್ಯಮದವರ ಬಳಿ ತಾವುಗಳು ಕಂಡ ಸತ್ಯವನ್ನು ವಿವರಿಸಿದರು.

ಅರಂಭದಲ್ಲಿ ವಿಠಲಶೆಟ್ಟರು ನಾಲ್ಕೈದು ಜನರ ಜೊತೆಗೊಂಡಿ ವರ್ಷದಲ್ಲಿ ಒಮ್ಮೆ ತಮ್ಮ ಕುಟುಂಬದ ದೇವರೆಂದು ಜೋತಿಷಿಗಳ ಅಣತಿಯಂತೆ ಪೂಜೆ ಪುನಸ್ಕಾರಗಳನ್ನು ಅರಂಭಿಸಿ ವರ್ಷದಿಂದ ವರ್ಷಕ್ಕೆ ತಾಯಿ ರಕ್ತೇಶ್ವರಿ ಮತ್ತು ನಾಗದೇವರು ಹೆಸರಿನಲ್ಲಿ ಈ ಕ್ಷೇತ್ರದಲ್ಲಿ ನೆಲೆಸಿದು.ಕಳೆದ ಹತ್ತುವರ್ಷದಿಂದಿಚೆಯಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ  ತನುಮನ ಧನದ ಸೇವಾ ಸಹಕಾರದೊಂದಿಗೆ ದೇವಸ್ಥಾನವೂ ಭವ್ಯವಾಗಿದ್ದು ಸುತ್ತಮುತ್ತಲಿನ ಅರಾಧ್ಯದೈವವಾಗಿ ನೆಲೆಸಿದೆ.

ಬೇಡಿ ಬರುವ ಭಕ್ತರ ಕಷ್ಟ ಕಾರ್ಪಣ್ಯ ನಿವಾರಣೆ;-

ಇಲ್ಲಿಗೆ ಬೇಡಿ ಬರುವ ಭಕ್ತರ ಕಷ್ಟವನ್ನು ಪರಿಹರಿಸುವ ಅಭೀಷ್ಟ ವರದಾಯಿಗೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಸಂಕಲ್ಪದಂತೆ ಗ್ರಾಮಸ್ಥರ ಮತ್ತು ದೇವಸ್ಥಾನ ಸೇವಾಸಮಿತಿಯವರ ಸಹಕಾರದಿಂದ ವಿಶೇಷ ಅಸಕ್ತಿವಹಿಸಿ ಜೀರ್ಣೋದ್ದಾರ ಕಾರ್ಯದಲ್ಲಿ ತೊಡಗಿಸಿಕೊಂಡು ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದ್ದು ದೇವಸ್ಥಾನದ ಅಡಳಿತ ಮಂಡಳಿಯ ಅಧ್ಯಕ್ಷರಾಧಿಯಾಗಿ ಸಮಿತಿಯವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲಿದೆ ಪ್ರಾಮಾಣಿಕವಾಗಿ ಶ್ರದ್ದಾಭಕ್ತಿಯಿಂದ ದೇವರ ಸೇವಾ ಕಾರ್ಯದಲ್ಲಿ ತೊಡಗಿರುವುದು ಇಲ್ಲಿನ ವಿಶೇಷತೆಯಾಗಿದೆ.

 ದೇವಸ್ಥಾನದ ಮುಂಭಾಗದ ಭವ್ಯ ಕಟ್ಟಡದ ಅಭಿವೃದ್ದಿಗಾಗಿ ಈಗಾಗಲೇ ಸುತ್ತಮುತ್ತಲಿನ ಹಲವು ಭಕ್ತರು ದೇಣಿಗೆ ನೀಡಿರುವುದು ಮತ್ತು ಸರ್ಕಾರದಿಂದ ಸಹ ಅನುಧಾನ ಸಹ ಬಿಡುಗಡೆಯಾಗಿದೆ ಅದರಲ್ಲಿಯೇ ಅಚ್ಚುಕಟ್ಟಾಗಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಭಕ್ತರ ಅಕರ್ಷಣೆಯ ಕೇಂದ್ರವನ್ನಾಗಿಸಿದ್ದಾರೆ.
 
 
  

Leave a Reply

Your email address will not be published. Required fields are marked *