ಹೊಸನಗರ ತಾಲೂಕಿನ ವ್ಯಾಪ್ತಿಯ ಕೆಳಕಂಡ ಗ್ರಾಮಗಳಿಂದ ಅಂಗನವಾಡಿ ಕಾರ್ಯಕರ್ತೆ/ಮಿನಿ ಕಾರ್ಯಕರ್ತೆ/ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಿನಿ ಅಂಗನವಾಡಿ ಕಾರ್ಯಕರ್ತೆ 02 ಹುದ್ದೆಗಳು, ದೇವಿಕೊಪ್ಪ ಮತ್ತು ಏರಿಸೀಮೆ.
ಅಂಗನವಾಡಿ ಸಹಾಯಕಿಯರು 04 ಹುದ್ದೆಗಳು, ಚಂದಾಳದಿಂಬ, ಚಂದಳ್ಳಿ, ಕರಿನಗೊಳ್ಳಿ ಮತ್ತು ಕೊಳಗಿ ಗ್ರಾಮಗಳು.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣ ಹೊಂದಿದ ಎಸ್‍ಎಸ್‍ಎಲ್‍ಸಿ ಒಳಗಿನ ವಿದ್ಯಾರ್ಹತೆಯುಳ್ಳ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಫೆ.13 ರೊಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಹೊಸನಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.