Headlines

ನಿನ್ನೆ ಆರತಕ್ಷತೆಯಲ್ಲಿ ಊಟ ಮಾಡಿದವರು ಇಂದು ಆಸ್ಪತ್ರೆಗೆ ದಾಖಲು : ಸುಮಾರು 150 ಕ್ಕೂ ಹೆಚ್ಚು ಜನರು ಅಸ್ವಸ್ಥ , ಎಲ್ಲಿ ಗೊತ್ತಾ ??

ಶಿವಮೊಗ್ಗ : ಇಲ್ಲಿನ ಸಮೀಪದ ಹರಮಘಟ್ಟದ ಆಲದಹಳ್ಳಿಯಲ್ಲಿ ನಿನ್ನೆ ಮದುವೆಯೊಂದರ ಆರತಕ್ಷತೆ ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಸುಮಾರು 60 ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯಿಸನ್ ಆಗಿದ್ದು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ  21 ಜನ ದಾಖಲಾಗಿದ್ದಾರೆ.

ನಿನ್ನೆ ಆಲದಹಳ್ಳಿ ದೊಡ್ಡೇರಿ ಕುಟುಂಬದವರ ಎರಡು ಜೋಡಿ ಮದುವೆಯ ಆರತಕ್ಷತೆಗೆ ಹಾಜರಾದ ಹರಮಘಟ್ಟ ಮತ್ತು ಆಲದಹಳ್ಳಿ ಗ್ರಾಮಸ್ಥರು ನಿನ್ನೆ ರಾತ್ರಿ ಊಟ ಮಾಡಿದ್ದಾರೆ.ಮರುದಿನ ಮಧ್ಯಾಹ್ನದಿಂದ ರಿಯಾಕ್ಷನ್ ಆಗಲು ಆರಂಭವಾಗಿದೆ.ಕೆಲ ಗ್ರಾಮಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
 ಹೊಳಲೂರಿನ ಆಸ್ಪತ್ರೆ ತುಂಬಿ ಹೋದ ಹಿನ್ನಲೆಯಲ್ಲಿ ಮೆಗ್ಗಾನ್ ಗೆ ಬಂದು ದಾಖಲಾಗಿದ್ದಾರೆ. ಫುಡ್ ಪಾಯಿಸನ್ ಆದವರ ಸಂಖ್ಯೆ 200 ಕ್ಕೆ ಏರುವ ಸಾಧ್ಯತೆ ಇದೆ ಎಂದು ದಾಖಲಾದವರು ತಿಳಿಸಿದ್ದಾರೆ.

ನಿನ್ನೆ ಮದುವೆಯ ಆರತಕ್ಷತೆಯಲ್ಲಿ ಮಾಡಿರುವ ಊಟದಿಂದ ಫುಡ್ ಪಾಯಿಸನ್ ಆಗಿದೆ ಎಂದು ಹೊಳಲೂರಿನಲ್ಲಿ ವೈದ್ಯರು ತಿಳಿಸಿದ್ದಾರೆ ಎಂದು ಮೆಗ್ಗಾನ್ ನಲ್ಲಿ ಅಡ್ಮಿಟ್ ಆಗಿರುವ ರೋಗಿಯೊಬ್ಬರು ತಿಳಿಸಿದ್ದಾರೆ.
ಕೆಲವರಿಗೆ ವಾಂತಿ ಆದರೆ ಕೆಲವರಿಗೆ ಬೇದಿ ಆಗಿದೆ. ತಲೆ ನೋವು,  ಸುಸ್ತು, ಚಳಿ ಮತ್ತು ಜ್ವರ ಕಾಣಿಸಿಕೊಂಡಾಗ ಹೊಳಲೂರಿನ ಆಸ್ಪತ್ರೆಗೆ ತೋರಿಸಿದಾಗ ಫುಡ್ ಪಾಯಿಸನ್ ಮೆಗ್ಗಾನ್ ಗೆ ದಾಖಲಾಗಲು ವೈದ್ಯರು ಶಿಫಾರಸು ಮಾಡಿದರು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *