Headlines

ಸಾಗರ : ಶಾಸಕರು ಸಾಗರ ನಗರವನ್ನು ಎಣ್ಣೆ ಸಾಗರ ಮಾಡಲು ಹೊರಟಿದ್ದಾರೆ : ಗೋಪಾಲಕೃಷ್ಣ ಬೇಳೂರು

ಸಾಗರ : ನಗರಸಭೆಯಲ್ಲಿ ಒಂದು ವಾರದಿಂದ ನೀರು ಬಿಡಲು ಯಾಂತ್ರಿಕ ತೊಂದರೆ ಎಂಬ ಕಾರಣ ಕೊಟ್ಟಿದ್ದಾರೆ. ಹಿನ್ನೀರಿನಿಂದ ನೀರು ತರುವ ಕೆಲಸವನ್ನ ನನ್ನ ಅವಧಿಯಲ್ಲಿ ಮಾಡಿದ್ದೆ, ಅಲ್ಲಿನಿಂದ ನೀರನ್ನೇಕೆ ಸಾಗರದ ಜನತೆಗೆ ನೀಡಿಲ್ಲ.

ಸಾಗರದಲ್ಲಿ ಬೀದಿ ನಾಯಿಗಳ ಹಾವಳಿ, ಬಿಡಾಡಿ ದನಗಳ ಹಾವಳಿ, ಹಂದಿಗಳ ಹಾವಳಿ ತಡೆಯಲು ನಗರಸಭೆ ಆಡಳಿತ ವಿಫಲವಾಗಿದೆ. ಶಾಸಕ ಹರತಾಳು ಹಾಲಪ್ಪ ಸಾಗರ ನಗರವನ್ನು ‘ಎಣ್ಣೆ’ ಸಾಗರ ಮಾಡಲು ಹೊರಟಿದ್ದಾರೆ ಎಂದರು.

ಕಾರ್ಗಲ್ ಜೋಗ ಭಾಗಕ್ಕೆ ಇರುವ ಒಂದು ಪೋಲೀಸ್ ಠಾಣೆಯನ್ನು ತುಮರಿ ಭಾಗಕ್ಕೆ ನೀಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ.ನೋ ನೆಟ್ವರ್ಕ್ ಸಮಸ್ಯೆಗಳನ್ನು ಬಗೆಹರಿಸುವೆ ಎಂದಿದ್ದ ಸಂಸದ ರಾಘವೇಂದ್ರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.

::ಬಿಜೆಪಿಯಲ್ಲಿ ಎರಡು ಟೀಂ ಇದೆ::

ಬಿಜೆಪಿ ಯೊಳಗೆ ಯಡಿಯೂರಪ್ಪ ಗುಂಪು ಮತ್ತು ಆರ್.ಎಸ್.ಎಸ್ ಗುಂಪುಗಳಿವೆ.ಯಡಿಯೂರಪ್ಪ ವಿರುದ್ಧ ಆರ್.ಎಸ್.ಎಸ್ ಗುಂಪು ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಸರು.

 ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳಬಾರದು ಎಂಬ ಕಾರಣಕ್ಕೆ ಮೇಶ್ ಮನೆ ಮೇಲೆ ಐಟಿ ದಾಳಿ ಮಾಡಿರುವ ಸಾಧ್ಯತೆಇದೆ ಎಂದು ಹೇಳಿದರು.

ಗೋಷ್ಟಿಯಲ್ಲಿ ತಾರಾಮೂರ್ತಿ, ಮಹಾಬಲ ಕೌತಿ, ಸೋಮಶೇಖರ ಲಾವಿಗೇರಿ, ಸುರೇಶ್’ಬಾಬು, ನಗರಸಭೆ ವಿರೋಧ ಪಕ್ಷದ ನಾಯಕ ಮಂಡಗಳಲೆ ಗಣಪತಿ, ರವಿ ಲಿಂಗನಮಕ್ಕಿ, ಸಂಜು ಹಾಜರಿದ್ದರು.




Leave a Reply

Your email address will not be published. Required fields are marked *