ಸಾಗರ:ಗೋವು ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿ ಸಾಗರದ ಮಾರಿಕಾಂಬ ದೇವಸ್ಥಾನ ಎದುರು ಇಂದು ಸಾಗರದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾಗರದ ಮಾರಿಕಾಂಬ ದೇವಸ್ಥಾನದ ತವರು ಮನೆ ಎದುರು ಗೋವು ಪೂಜೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಜಿಲ್ಲಾ ರಕ್ಷಣಾಧಿಕಾರಿಗಳು ಬರುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವ ತೀರ್ಮಾನವನ್ನು ವಿಹಿಂಪ ಮತ್ತು ಬಜರಂಗದಳ ತೆಗೆದುಕೊಂಡಿದೆ. ಸಾಗರದ ಬಿ.ಹೆಚ್.ರಸ್ತೆಯ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಮಾಡಲಾಗುವುದೆಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಸರಕಾರದ ವಿರುದ್ದ, ಪೋಲೀಸರ ವಿರುದ್ದ ಮತ್ತು ನಗರಸಭೆ ಆಡಳಿತ ವಿರುದ್ದ ಘೋಷಣೆಗಳನ್ನು ವಿಹಿಂಪ ಮತ್ತು ಬಜರಂಗದಳದ ಕಾರ್ಯಕರ್ತರು ಕೂಗಿದರು.
ಪ್ರತಿಭಟನೆಯಲ್ಲಿ ಸಂತೋಷ್ ಶಿವಾಜಿ, ರಾಘು ಕಾಮತ್, ಕೃಷ್ಣಮೂರ್ತಿ, ಅ.ಪು. ನಾರಾಯಣಪ್ಪ, ಶ್ರೀಧರ್ ಸಾಗರ್, ಸುದರ್ಶನ್ ವಕೀಲರು, ಪ್ರತಿಮಾ ಜೋಗಿ, ಶೋಭಾ, ಆಶಾ ನಾಗರಾಜ್, ಕಿರಣ, ನಂದೀಶ, ರವೀಶ್, ಐ.ವಿ. ಹೆಗಡೆ. ವಿರೂಪಾಕ್ಷ ಗೌಡ. ಇನ್ನಿತರ ಪ್ರಮುಖರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.
ಮಾಹಿತಿ : ಮಲೆನಾಡ ರಹಸ್ಯ