Headlines

ಸಚಿವ ಈಶ್ವರಪ್ಪಗೆ ಬಿಜೆಪಿಯಿಂದ ಮಹತ್ವದ ಜವಾಬ್ದಾರಿ

ಶಿವಮೊಗ್ಗ : ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ವಹಿಸಲಾಗಿದೆ. 

ದಾವಣಗೆರೆಯ ತ್ರಿಶೂಲ ಕಲಾ ಭವನದಲ್ಲಿ ಭಾನುವಾರ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ಅಧ್ಯಕ್ಷತೆಯ ಸಭೆಯಲ್ಲಿ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿಯನ್ನು ಸಚಿವ ಈಶ್ವರಪ್ಪನವರಿಗೆ ನೀಡಿ ಅಭಿನಂದಿಸಲಾಯಿತು. 

ಪಕ್ಷ ತನಗೆ ವಹಿಸಿರುವ ಜವಾಬ್ದಾರಿಗೆ ಈಶ್ವರಪ್ಪ ಅವರು ವರಿಷ್ಠರಿಗೆ ಧನ್ಯವಾದ ತಿಳಿಸಿದ್ದಾರೆ. ಒಬಿಸಿ ಮೋರ್ಚಾದ ನೇತೃತ್ವ ವಹಿಸುವ ಗುರುತರ ಜವಾಬ್ದಾರಿಯನ್ನು ತಮಗೆ ವಹಿಸಿದ ಪಕ್ಷದ ವರಿಷ್ಠರಿಗೆ ಆಭಾರಿಯಾಗಿರುತ್ತೇನೆ. ಪಕ್ಷ ಸಂಘಟನೆ, ಬಲವರ್ಧನೆಯೇ ತಮ್ಮ ಪ್ರಮುಖ ಆದ್ಯತೆ ಎಂಬುದಾಗಿ ನಂಬಿದ್ದೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *