Headlines

ಶಿವಮೊಗ್ಗ: ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಯಾಗ

ಶಿವಮೊಗ್ಗ : ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಚಾರ ಮಂಚ್ ಹಾಗೂ ಅರ್ಚಕರ ವೃಂದದಿಂದ ಪ್ರಧಾನಿ ಮೋದಿ ಅವರ 71 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಗಣಪತಿ ಯಾಗ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಭಾಪತಿ
ಡಿ.ಹೆಚ್.ಶಂಕರ್ ಮೂರ್ತಿ, ಪ್ರಧಾನಿ ಮೋದಿ ಅವರು ಕೊರೋನ ಲಸಿಕೆ ಹಂಚಿಕೆಯನ್ನ ಗುರಿಯಾಗಿ ಇಟ್ಟುಕೊಂಡು ಮುಂದುವರಿದು ಇಂದು ಯಶಸ್ವಿಯಾಗಿ 80 ಕೋಟಿ ಜನರಿಗೆ ಲಸಿಕೆ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.

ಸೆ. 17 ರ ಅವರ ಹುಟ್ಟುಹಬ್ಬದ ದಿನದಂದು 2 ಕೋಟಿಗೂ ಹೆಚ್ಚು ಲಸಿಕೆ ನೀಡಿ ಮೈಲಿಗಲ್ಲನ್ನ ಸ್ಥಾಪಿಸಲಾಗಿದೆ. ಹೀಗೆ ಅಂದುಕೊಂಡ
ಗುರಿಯನ್ನ ಮೋದಿ ಅವರು ಶಾಂತ ಚಿತ್ತರಾಗಿ ಸಾಧಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಕೆಲಸ ಮೋದಿ ಅವರಿಂದ ಬರಲಿ ಎಂದು ಆಶಿಸುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *