ರಿಪ್ಪನ್ ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್ ನಾಮಕರಣಗೊಳಿಸುವಂತೆ ಆಗ್ರಹಿಸಿ 30 ಗ್ರಾಮಗಳಲ್ಲಿ ಸಾರ್ವಜನಿಕ ಸಹಿ ಸಂಗ್ರಹಣ ಅಭಿಯಾನಕ್ಕೆ ರಿಪ್ಪನ್‌ಪೇಟೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಇಂದು ಸಾರ್ವಜನಿಕರ ಸಹಿ ಸಂಗ್ರಹಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಯಿಂದ ತಾಲೂಕಿನ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ.ಒಂದು ತಾಲೂಕ್ಕಿಗೆ ಇಬ್ಬಿಬ್ಬರು ಶಾಸಕರಾಗಿ ಅಭಿವೃದ್ಧಿ ಕಾರ್ಯಗಳು ಕನಸಿನ ಮಾತಾಗಿದೆ.ನಮ್ಮ ತಾಲೂಕ್ಕಿಗೆ ವಿಧಾನಸಭಾ ಕ್ಷೇತ್ರ ಕೇಳುವುದು ನಮ್ಮ ಹಕ್ಕು ,ಇಲ್ಲದಿದ್ದಲ್ಲಿ ಹೊಸನಗರ ತಾಲೂಕ್ ನ ಹೋಬಳಿಗಳು ತೀರ್ಥಹಳ್ಳಿ-ಸಾಗರ ವಿಧಾನಸಭಾ ಕ್ಷೇತ್ರಗಳ ನಡುವೆ ಹಂಚಿಹೋಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತದೆ ಎಂದರು.

ಈ ಹಿಂದೆ ಇದ್ದಂತೆ ನಮ್ಮ ಹೊಸನಗರ ಕ್ಷೇತ್ರವನ್ನು ಪುನರ್ ನಾಮಕರಣ ಮಾಡುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದಾಗಿ ತಾಲ್ಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಸಹಿ ಸಂಗ್ರಹಣೆಗೆ ತೆರಳುವುದಾಗಿ ತಿಳಿಸಿ ಇಂದಿನಿಂದ ರಿಪ್ಪನ್‌ಪೇಟೆಯಿಂದ ಆರಂಭಿಸಲಾಗುತ್ತಿದೆ ಎಂದರು.


ರೈಲು ನಿಲುಗಡೆಗೊಳಿಸಲು ಸಾಧ್ಯವಾಗದಿದ್ದಲ್ಲಿ ಬಿ ವೈ ರಾಘವೇಂದ್ರ ರಾಜಿನಾಮೆ ನೀಡಲಿ :

ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಅರಸಾಳು ರೈಲ್ವೆ ನಿಲ್ದಾಣಕ್ಕೆ ಅದರದೇ ಆದ ಇತಿಹಾಸ ಇದೆ. ಅರಸಾಳು ರೈಲ್ವೇ ನಿಲ್ದಾಣದಲ್ಲಿ ಎಲ್ಲಾ ರೀತಿಯ ಸವಲತ್ತು ಇದ್ದರೂ ಇಲ್ಲಿ ರೈಲ್ವೇ ನಿಲುಗಡೆ ಮಾಡದೇ ಇರುವುದರ ಹಿಂದೆ ದುರುದ್ದೇಶವಿದೆ.ಶಿವಮೊಗ್ಗ–ತಾಳಗುಪ್ಪ– ಬೆಂಗಳೂರು ರೈಲು ಈ ಹಿಂದೆ ಇಲ್ಲಿ ನಿಲುಗಡೆಗೊಳಿಸುತ್ತಿದ್ದು ಕೊರೊನಾ ಕಾಲದಲ್ಲಿ ಸ್ವಲ್ಪ ದಿನ ತೊಂದರೆಯಾಗಿತ್ತು.ಈ ಹಿಂದೆ ಸಂಸದರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಒಂದು ವೇಳೆ ಸಂಸದರಿಗೆ ರೈಲು ನಿಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಈ ಕೂಡಲೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರಿಪ್ಪನ್‌ಪೇಟೆಯ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ಜೆಡಿಎಸ್ ಮುಖಂಡ ಆರ್.ಎ.ಚಾಬುಸಾಬ್ ಈ ಸಂದರ್ಭದಲ್ಲಿ ಆಗ್ರಹಿಸಿದರು.

Leave a Reply

Your email address will not be published. Required fields are marked *